ADVERTISEMENT

ಮಜಾಫ್ಫರ್‌ಪುರ ಲೈಂಗಿಕ ಕಿರುಕುಳ ಪ್ರಕರಣ: ಠಾಕೂರ್‌ ವೈದ್ಯಕೀಯ ಪರೀಕ್ಷೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:05 IST
Last Updated 6 ಡಿಸೆಂಬರ್ 2018, 19:05 IST

ನವದೆಹಲಿ:ಬಿಹಾರದ ಮಜಾಫ್ಫರ್‌ಪುರ ಸರ್ಕಾರಿ ಬಾಲಮಂದಿರದ ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್‌ ಠಾಕೂರ್‌ನ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಆದೇಶಿಸಿದೆ.

ನ್ಯಾಯಾಂಗ ಅಧಿಕಾರಿಯ ಸಮಕ್ಷಮದಲ್ಲಿ ಈ ಪರೀಕ್ಷೆ ನಡೆಸುವಂತೆ ಪಾಟಿಯಾಲ ಸೆಂಟ್ರಲ್‌ ಜೈಲ್‌ ಸೂಪರಿಂಟಿಂಡೆಂಟ್‌ಗೆ ಪೀಠ ಸೂಚನೆ ನೀಡಿದೆ.‘ಜೈಲಿನಲ್ಲಿ ನಮ್ಮ ತಂದೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ’ ಎಂದು ಠಾಕೂರ್‌ ಮಗ ಮತ್ತು ಮಗಳು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT