ADVERTISEMENT

‘ಭಾರತ್ ಜೋಡೊ ಯಾತ್ರೆ’ಗೆ ರಾಜಶೇಖರ ರೆಡ್ಡಿಯವರ ಪಾದಯಾತ್ರೆ ಸ್ಫೂರ್ತಿ: ರಾಹುಲ್

ಪಿಟಿಐ
Published 8 ಜುಲೈ 2024, 10:22 IST
Last Updated 8 ಜುಲೈ 2024, 10:22 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ತಾವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ 4,000 ಕಿ.ಮೀ ಭಾರತ್ ಜೋಡೊ ಯಾತ್ರೆಯು 2003ರಲ್ಲಿ ಪಕ್ಷದ ಹಿರಿಯ ನಾಯಕ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರು ಆಂಧ್ರ ಪ್ರದೇಶ ರಾಜ್ಯದಾದ್ಯಂತ ನಡೆಸಿದ ಪಾದಯಾತ್ರೆಯಿಂದ ಸ್ಫೂರ್ತಿ ಪಡೆದದ್ದಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ADVERTISEMENT

ರಾಜಶೇಖರ ರೆಡ್ಡಿಯವರ 75ನೇ ಜನ್ಮ ಜಯಂತಿ ಹಿನ್ನೆಲೆ ವಿಡಿಯೊ ಸಂದೇಶ ನೀಡಿರುವ ರಾಹುಲ್, ಅವರು(ರಾಜಶೇಖರ ರೆಡ್ಡಿ) ಜನರ ನಿಜವಾದ ನಾಯಕರಾಗಿದ್ದರು. ರಾಜ್ಯ ಮತ್ತು ದೇಶದ ಜನರ ಉನ್ನತಿ ಹಾಗೂ ಸಬಲೀಕರಣಕ್ಕಾಗಿ ಅವರ ದಿಟ್ಟ ಹೋರಾಟ, ಬದ್ಧತೆ ಮತ್ತು ಸಮರ್ಪಣೆಯು ಹಲವರಿಗೆ ದಾರಿದೀಪವಾಗಿದೆ ಎಂದು ಕೊಂಡಾಡಿದ್ದಾರೆ.

‘ನಾನು ರಾಜಶೇಖರ ರೆಡ್ಡಿಯವರಿಂದ ವೈಯಕ್ತಿಕವಾಗಿ ಬಹಳಷ್ಟನ್ನು ಕಲಿತಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ನನ್ನ ಭಾರತ್ ಜೋಡೊ ಯಾತ್ರೆಯು ರೆಡ್ಡಿಯವರ ಪಾದಯಾತ್ರೆಯಿಂದ ಸ್ಫೂರ್ತಿ ಪಡೆದಿದ್ದಾಗಿದೆ. ಬಿಸಿಲು, ಮಳೆಯಲ್ಲೂ ಆಂಧ್ರ ಪ್ರದೇಶದ ಜನರ ಜೊತೆಗಿನ ರೆಡ್ಡಿಯವರ ನಡಿಗೆ ನನಗೆ ನೆನಪಾಗುತ್ತಿದೆ’ಎಂದಿದ್ದಾರೆ.

‘ಅಂತಹ ಯಾತ್ರೆಗಳನ್ನು ಪರಿಗಣಿಸಿ ಭಾರತ್ ಜೋಡೊ ಯಾತ್ರೆ ರೂಪಿಸಿದೆವು’ ಎಂದು ಅವರು ಹೇಳಿದ್ದಾರೆ.

2003ರಲ್ಲಿ ರೆಡ್ಡಿ ಆಂಧ್ರ ಪ್ರದೇಶದ ಉದ್ದಕ್ಕೂ 1,400 ಕಿ.ಮೀ ಪಾದಯಾತ್ರೆ ಮಾಡಿದ್ದರು. ವರ್ಷದ ಬಳಿಕ, ಟಿಡಿಪಿಯನ್ನು ಸೋಲಿಸಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.