ಲಂಡನ್: ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದೆ, ನನ್ನ ಪುತ್ರಿ ಆಕೆಯ ಪತಿಯನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದಳು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಹೇಳಿದ್ದಾರೆ.
ಸುಧಾಮೂರ್ತಿ ಅವರ ಮಗಳು ಅಕ್ಷತಾ ಅವರ ಪತಿ ರಿಷಿ ಸುನಾಕ್ ಬ್ರಿಟನ್‌ನ ಪ್ರಧಾನಿಯಾಗಿದ್ದಾರೆ.
ಸುಧಾಮೂರ್ತಿಯವರು ಮಾತನಾಡಿರುವ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದೆ. ನನ್ನ ಮಗಳು ಆಕೆಯ ಪತಿಯನ್ನು ಯುಕೆಯ ಪ್ರಧಾನಿಯನ್ನಾಗಿ ಮಾಡಿದಳು‘ ಎಂದು ಅವರು ಹೇಳುವುದು ವಿಡಿಯೊದಲ್ಲಿ ದಾಖಲಾಗಿದೆ.
‘ಎಲ್ಲವೂ ಪತ್ನಿಯ ಮಹಿಮೆ. ಗಂಡನನ್ನು ಹೆಂಡತಿ ಹೇಗೆ ಬದಲಾಯಿಸಬಹುದು ಎನ್ನುವುದನ್ನು ನೋಡಿ. ಆದರೆ ನಾನು ನನ್ನ ಪತಿಯನ್ನು ಬದಲಿಸಲು ಆಗಲಿಲ್ಲ‘ ಎಂದು ಅವರು ಹೇಳಿರುವುದು ವಿಡಿಯೊದಲ್ಲಿದೆ.
ರಿಷಿ ಸುನಾಕ್ ಹಾಗೂ ಅಕ್ಷತಾ ಅವರ ವಿವಾಹ 2009ರಲ್ಲಿ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.