ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಅವರ ಆತ್ಮಚರಿತ್ರೆ ‘ಮೈ ಲೈಫ್, ಮೈ ಮಿಷನ್’ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.
ಹಿರಿಯ ಪತ್ರಕರ್ತ ಉದಯ್ ಮಹುರ್‌ಕರ್ ಜೊತೆಗೂಡಿ ರಾಮ್‌ದೇವ್, ತಮ್ಮ ಆತ್ಮಚರಿತ್ರೆಯನ್ನು ಬರೆಯಲಿದ್ದು, ಕೃತಿಯಲ್ಲಿ ರಾಮ್‌ದೇವ್ ಅವರ ಜೀವನದ ಬಹುದೊಡ್ಡ ತಿರುವು, ಸಾಧನೆಗಳು ಮತ್ತು ವಿವಾದಾತ್ಮಕ ಅಂಶಗಳು ಇರಲಿವೆ.
‘ರಾಮ್‌ದೇವ್ ಅವರ ನಿರೂಪಣೆಯಲ್ಲಿ ಬರಲಿರುವ ಕೃತಿ ಆಗಸ್ಟ್‌ನಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದೆ’ ಎಂದು ಪೆಂಗ್ವಿನ್ ರ‍್ಯಾಂಡಂ ಹೌಸ್ ಪ್ರಕಾಶನ ಹೇಳಿದೆ.
ತಮ್ಮ ಆತ್ಮಚರಿತ್ರೆ ಕುರಿತು ಟ್ವಿಟರ್‌ನಲ್ಲಿ ಘೋಷಿಸಿರುವ ರಾಮ್‌ದೇವ್, ‘ಬಹಳಷ್ಟು ಮಂದಿ ನನ್ನ ಬಗ್ಗೆ ಬರೆದಿದ್ದಾರೆ. ಈಗ ನಾನೇ ನನ್ನ ನುಡಿಗಳಲ್ಲಿ ನನ್ನ ಬದುಕಿನ ಕಥೆಯನ್ನು ಹಂಚಿಕೊಳ್ಳಲಿರುವೆ. ಇಂದೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಲು ಮರೆಯಬೇಡಿ’ ಎಂದಿದ್ದಾರೆ.
ಹರಿಯಾಣದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಬಾಬಾ ರಾಮ್‌ದೇವ್ ಅಂತರರಾಷ್ಟ್ರೀಯ ಮಟ್ಟದವರೆಗೆ ಬೆಳೆದು ಬಂದ ವಿವಿಧ ಹಂತಗಳು, ಯೋಗದ ಬಗೆಗಿನ ಅವರ ಮೋಹ, ಆರೋಗ್ಯ, ಅವರ ಮಿತ್ರರು–ಶತ್ರುಗಳು, ಸ್ವದೇಶ ಚಳವಳಿಯನ್ನು ಅವರು ಮುಂಚೂಣಿಗೆ ತಂದ ಬಗೆಯನ್ನು ಆತ್ಮಚರಿತ್ರೆ ಒಳಗೊಂಡಿದೆ.
ಅಷ್ಟೇ ಅಲ್ಲ ರಾಮ್‌ದೇವ್ ಅವರ ಬಹುದೊಡ್ಡ ಸಾಧನೆಯಾಗಿರುವ, ವಾರ್ಷಿಕ 12 ಸಾವಿರ ಕೋಟಿ ವಹಿವಾಟು ನಡೆಸುವ ‘ಪತಂಜಲಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್’ ಬೆಳವಣಿಗೆಬಗ್ಗೆಯೂ ಕೃತಿ ಬೆಳಕು ಚೆಲ್ಲಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.