ಬ್ಯಾಂಕಾಕ್ (ಎ.ಪಿ): ಹೊಸ ವರ್ಷದ ಆಚರಣೆ ನಿಮಿತ್ತ ಮ್ಯಾನ್ಮಾರ್‌ನ ಸೇನಾ ಸರ್ಕಾರವು ಸೋಮವಾರ ಸುಮಾರು 3,113 ಕೈದಿಗಳಿಗೆ ಕ್ಷಮಾದಾನವನ್ನು ನೀಡಿದ್ದು, ಬಿಡುಗಡೆಗೆ ಕ್ರಮವಹಿಸಿದೆ.
ಆದರೆ, ಸೇನಾ ದಂಗೆಯನ್ನು ವಿರೋಧಿಸಿದ ಕಾರಣಕ್ಕೆ ಬಂಧಿಸಲಾಗಿರುವ ರಾಜಕೀಯ ಕೈದಿಗಳೂ ಇದರಲ್ಲಿ ಸೇರಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
‘ಸೇನೆ ಆಡಳಿತ ನಡೆಸಲು ರಚಿಸಿರುವ ರಾಜ್ಯ ಆಡಳಿತ ಮಂಡಳಿಯು 3,113 ಕೈದಿಗಳಿಗೆ ಕ್ಷಮಾದಾನ ನೀಡಿದೆ. ಇವರಲ್ಲಿ 98 ವಿದೇಶಿಯರು ಸೇರಿದ್ದಾರೆ‘ ಎಂದು ವರದಿ ತಿಳಿಸಿದೆ.
ಸೇನಾ ದಂಗೆ ವಿರೋಧಿಸಿದ ಕಾರಣ ಬಂಧಿಸಲಾಗಿರುವ 17,460 ರಾಜಕೀಯ ಕೈದಿಗಳಿದ್ದಾರೆ. ಆಂಗ್ ಸಾನ್ ಸೂ ಕಿ ಪದಚ್ಯುತಿ ಬಳಿಕ ಫೆ.1, 2021ರಿಂದ ಇಲ್ಲಿ ಸೇನಾ ಆಡಳಿತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.