ADVERTISEMENT

ಮೈಸೂರಿನ ಕಲಾವಿದ ಅರುಣ್‌ ಕೈಯಲ್ಲಿ ಅರಳಲಿದೆ ಬೋಸ್‌ ಪ್ರತಿಮೆ

ನವದೆಹಲಿ ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪನೆ

ಪಿಟಿಐ
Published 31 ಮೇ 2022, 20:07 IST
Last Updated 31 ಮೇ 2022, 20:07 IST
ಆದಿ ಶಂಕರಾಚಾರ್ಯರ ಪ್ರತಿಮೆಯೊಂದಿಗೆ ಶಿಲ್ಪಿ ಅರುಣ್‌ ಯೋಗಿರಾಜ್‌ (ಸಂಗ್ರಹ ಚಿತ್ರ) –‍ಪಿಟಿಐ ಚಿತ್ರ
ಆದಿ ಶಂಕರಾಚಾರ್ಯರ ಪ್ರತಿಮೆಯೊಂದಿಗೆ ಶಿಲ್ಪಿ ಅರುಣ್‌ ಯೋಗಿರಾಜ್‌ (ಸಂಗ್ರಹ ಚಿತ್ರ) –‍ಪಿಟಿಐ ಚಿತ್ರ   

ನವದೆಹಲಿ:ಇಲ್ಲಿನ ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲಾಗುವ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯು ಮೈಸೂರು ಮೂಲದ ಶಿಲ್ಪಕಲಾವಿದ ಅರುಣ್‌ ಯೋಗಿರಾಜ್‌ ಅವರ ಕೆತ್ತನೆಯಲ್ಲಿ ಅರಳಲಿದೆ.

ಆಗಸ್ಟ್‌ 15ರೊಳಗೆ ಪ್ರತಿಮೆ ಕೆತ್ತನೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯದ ಮೂಲಗಳು ಹೇಳಿವೆ.

ಈ ಮೊದಲು ಇದೇ ಸ್ಥಳದಲ್ಲಿದ್ದ ಅಮರ ಜವಾನ್ ಜ್ಯೋತಿ ಹಿಂಭಾಗದಲ್ಲಿನ ಬೃಹತ್ ಮಂಟಪದಲ್ಲಿ ಬೋಸ್‌ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ ಎಂದು ಮೂಲಗಳು ಮಂಗಳವಾರ ಹೇಳಿವೆ.

ADVERTISEMENT

ಬೋಸ್‌ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ ಬಳಿ ಸ್ಥಾಪಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿರುವ ಕೊಡುಗೆಯನ್ನು ಗೌರವಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು, ಬೋಸ್‌ ಅವರ 125ನೇ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಘೋಷಿಸಿದ್ದರು.

ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾಗಿರುವ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಸಹ ಅರುಣ್ ಅವರೇ ಕೆತ್ತಿದ್ದಾರೆ. ಕಳೆದ ವರ್ಷ ಈ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.