ನಾಗ್ಪುರ: ಸಾರ್ವಜನಿಕ ಸ್ಥಳಗಳು, ಮನೆಗಳು, ಮದುವೆ ಸಮಾರಂಭ ಮತ್ತು ಇತರ ಕಾರ್ಯಕ್ರಮಗಳು ನಡೆಯುವಲ್ಲಿ ‘ಟ್ರಾಮ್ಸ್‌ಜೆಂಡರ್’ಗಳು ಭಿಕ್ಷಾಟನೆ ಮಾಡುವುದನ್ನು ನಿಷೇಧಿಸುವ ಆದೇಶವನ್ನು ಮಹಾರಾಷ್ಟ್ರದ ನಾಗ್ಪುರ ನಗರ ಪೊಲೀಸರು ಮತ್ತೆ ಹೊರಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಈ ಹಿಂದೆ ಜನವರಿಯಲ್ಲಿ ಈ ಕುರಿತ ಆದೇಶವನ್ನು ಹೊರಡಿಸಲಾಗಿತ್ತು. ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಿಕ್ಷಾಟನೆ ನೆಪದಲ್ಲಿ ವಾಹನ ಸವಾರರಿಗೆ, ದಾರಿ ಹೋಕರಿಗೆ ಕಿರುಕುಳ ನೀಡುವುದು, ಸುಗಮ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ಅಡ್ಡಿಪಡಿಸುವುದನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಈ ಆದೇಶ ಉಲ್ಲಂಘಿಸಿದರೆ ಒಂದು ತಿಂಗಳಿಂದ ಆರು ತಿಂಗಳವರೆಗೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಈ ಆದೇಶವು ಆಗಸ್ಟ್ 16ರಿಂದ ಅಕ್ಟೋಬರ್ 14ರವರೆಗೆ ಜಾರಿಯಲ್ಲಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.