ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ NaMo App ಹೊಸ ಪ್ರಯೋಗಕ್ಕೆ ಮುಂದಾಗಿದೆ.
‘ಈ ಆ್ಯಪ್ ಮೂಲಕ, ಪ್ರಧಾನಿ ಮೋದಿ ಅವರ ಬಗ್ಗೆ, ಕೇಂದ್ರ ಸರ್ಕಾರ ಹಾಗೂ ಅದರ ಯೋಜನೆಗಳ ಬಗ್ಗೆ ಜನಗಳ ಮನ ಹೇಗಿದೆ ಎಂಬ ಸಮೀಕ್ಷೆ ಮಾಡಲಾಗುತ್ತದೆ. ಅಲ್ಲದೇ ಲೋಕಸಭೆಯ ಸದಸ್ಯರ ಬಗೆಗಿನ ಆ ಕ್ಷೇತ್ರದ ಜನರ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಲಾಗುತ್ತದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
‘ಈ ಸಮೀಕ್ಷೆ ಪ್ರಜಾಸತ್ತಾತ್ಮಕವಾಗಿ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಯಾವಾಗಲೂ ಮುಂದು’ ಎಂದು ಹೇಳಿವೆ.
‘ಈ ಆ್ಯಪ್‌ನಲ್ಲಿ ನಡೆಯುವ ಸಮೀಕ್ಷೆ ವಿಶೇಷವೆಂದರೆ, ಸಮೀಕ್ಷೆ ಬಳಕೆದಾರ ಸ್ನೇಹಿಯಾಗಿ ಇರಲಿದ್ದು, ಸರ್ಕಾರದ ಯೋಜನೆಗಳು, ಪ್ರಧಾನಿಯವರ ಬಗ್ಗೆ, ಅವರ ಸಚಿವ ಸಂಪುಟ ಬಗ್ಗೆ ಹಾಗೂ ಲೋಕಸಭಾ ಸದಸ್ಯರ ಬಗ್ಗೆ ಗೊಂದಲವಿಲ್ಲದ ಪ್ರಶ್ನೆಗಳನ್ನು ಕೇಳಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
NaMo App ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಂದು ಕೋಟಿಗೂ ಅಧಿಕ ಡೌನ್‌ಲೋಡ್‌ಗಳನ್ನು ಕಂಡಿದೆ.
ಏಪ್ರಿಲ್–ಮೇನಲ್ಲಿ ಲೋಕಸಭೆ ಚುನಾವಣೆ ಜರುಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.