ADVERTISEMENT

‘ನಮೋ ಟಿ.ವಿ ಜಾಹೀರಾತು ವಾಹಿನಿ’

ಪಿಟಿಐ
Published 3 ಏಪ್ರಿಲ್ 2019, 20:30 IST
Last Updated 3 ಏಪ್ರಿಲ್ 2019, 20:30 IST
...
...   

ನವದೆಹಲಿ: ನಮೋ ಟಿ.ವಿ ಸ್ಥಗಿತಗೊಳಿಸುವಂತೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿರುವ ನಡುವೆಯೇ, ಹೊಸ ವಾದ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

‘ಇದು ಜಾಹೀರಾತು ವಾಹಿನಿ, ಇದರ ಪ್ರಸಾರಕ್ಕೆ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ. ಕೆಲವೊಂದು ‘ಡಿಟಿಎಚ್‌’ಗಳಲ್ಲಿ ಮಾತ್ರ ಟಿ.ವಿ ಪ್ರಸಾರವಾಗುತ್ತಿದ್ದು, ಜಾಹೀರಾತಿಗೆ ಬಿಜೆಪಿ ಹಣ ನೀಡಿದೆ’ ಎಂದು ವಾದ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ನಮೋ ಟಿ.ವಿ ಉದ್ಘಾಟನೆ ವಿಚಾರವಾಗಿ ವರದಿ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.