ನವದೆಹಲಿ: ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿಯು ‘ನಮೋ ಟಿ.ವಿ.’ ಎಂಬ ಹೊಸ ವಾಹಿನಿಗೆ ಭಾನುವಾರ ಚಾಲನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶ ಹಾಗೂ ಭಾಷಣದ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.
ವಾಹಿನಿಗೆ ಚಾಲನೆ ನೀಡಿರುವ ಕುರಿತು ಬಿಜೆಪಿ ಭಾನುವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಚಾನಲ್‌ನ ಲೊಗೊದಲ್ಲಿ ಮೋದಿ ಅವರ ಚಿತ್ರವಿದೆ. ಆದರೆ ಇದರ ಮಾಲೀಕತ್ವದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಡಿಶ್ ಟಿ.ವಿ., ಟಾಟಾ ಸ್ಕೈ, ಸಿಟಿ, ಏರ್‌ಟೆಲ್ ಹಾಗೂ ಡಿ2ಎಚ್ ಮೊದಲಾದ ಡಿಟಿಎಚ್‌ಗಳಲ್ಲಿ ಚಾನಲ್ ಲಭ್ಯವಿದೆ.
ಇದು ನಮೋ ಆ್ಯಪ್‌ನ ಮುಂದುವರಿದ ಭಾಗ ಎಂದು ಹೇಳಲಾಗಿದೆ. ಆದರೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ವಾಹಿನಿಗಳ ಪಟ್ಟಿಯಲ್ಲಿ ಇದರ ಪ್ರಸ್ತಾಪ ಇಲ್ಲ.
ಮೋದಿ ಅವರ ಸಮಾವೇಶಗಳ ನೇರ ಪ್ರಸಾರ, ಮೋದಿ ಅವರ ಹಿಂದಿನ ಭಾಷಣಗಳು, ಕೇಂದ್ರ ಸರ್ಕಾರದ ಐದು ವರ್ಷಗಳ ಸಾಧನೆ ಬಿಂಬಿಸುವ ಜಾಹೀರಾತುಗಳು ಈ ವಾಹಿನಿಯಲ್ಲಿ ಪ್ರಸಾರವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.