ಫಿಥೋರ್‌ಗರ್(ಉತ್ತರಾಖಂಡ):ಹಿಮಾಲಯದ ನಂದಾ ದೇವಿಪರ್ವತದ ಚಾರಣ ವೇಳೆ ಪ್ರತೀಕೂಲ ಹವಾಮಾನದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ನಾಲ್ವರು ಪರ್ವತಾರೋಹಿಗಳನ್ನು ರಕ್ಷಿಸಲಾಗಿದೆ. ಉಳಿದ 8 ಜನರಿಗಾಗಿಶೋಧ ಕೈಗೊಳ್ಳಲಾಗಿದೆ.
ಮೇ 13ರಂದು ಚಾರಣಕ್ಕೆ ತೆರಳಿದ್ದ ಎಂಟು ಮಂದಿ ಶುಕ್ರವಾರ ಕಾಣೆಯಾಗಿದ್ದರು. ಅವರಿಗಾಗಿ ಇಂಡೋ–ಟಿಬೆಟಿಯನ್ ಗಡಿ ಪೊಲೀಸರು ಹುಡುಕಾಟ ನಡೆಸಿದ್ದರು.
ಪ್ರತೀಕೂಲ ಹವಾಮಾನದಿಂದಾಗಿ ಚಾರಣ ವೇಳೆ ಕಾಣೆಯಾಗಿದ್ದವರ ಪೈಕಿ ನಾಲ್ವರನ್ನು ರಕ್ಷಿಸಲಾಗಿದೆ. ಉಳಿದ ಎಂದು ಜನರಿಗಾಗಿ ಶೋಧ ನಡೆಸಲಿದ್ದೇವೆ. ಹವಾಮಾನ ಪರಿಸ್ಥಿತಿ ನೋಡಿಕೊಂಡು ಮುಂದಿನ ಎರಡು ದಿನಗಳಲ್ಲಿ ಹುಡುಕಾಟ ನಡೆಸಲಿದ್ದೇವೆ ಎಂದು ಪಿಥೋರ್‌ಗರ್‌ನ ಡಿಎಂ ವಿ.ಕೆ.ಜೋಗ್ದಾಂಡೆ ಅವರು ತಿಳಿಸಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.
ಪರ್ವತಾರೋಹಿಗಳು ಚಾರಣ ವೇಳೆ ಬೇಸ್ ಕ್ಯಾಂಪ್‌ಗೆ ಹಿಂದಿರುಗದೇ ಇದ್ದಾಗ ಅವರಿಗಾಗಿ ಹುಡುಕಾಟ ಆರಂಭಿಸಲಾಗಿದೆ.ವಿಪರೀತ ಮಳೆ ಹಾಗೂ ಹಿಮಪಾತದಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.
ನಂದಾ ದೇವಿ ಭಾರತದ ಎರಡನೇ ಅತ್ಯಂತ ಎತ್ತರದ ಹಿಮಾಲಯ ಪರ್ವತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.