ADVERTISEMENT

ಜನ‌ಧನ ಯೋಜನೆಯಿಂದ ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ: ನರೇಂದ್ರ ಮೋದಿ

ಜನಧನ್‌ ಯೋಜನೆಗೆ ಆರು ವರ್ಷ – ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 8:15 IST
Last Updated 28 ಆಗಸ್ಟ್ 2020, 8:15 IST
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ   

ನವದೆಹಲಿ: 'ಪ್ರಧಾನಮಂತ್ರಿ ಜನಧನ’ ಯೋಜನೆ ಬಡತನ ನಿರ್ಮೂಲನೆಯಂತಹ ಹಲವು ಯೋಜನೆಗಳಿಗೆ ತಳಹದಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

’ಪ್ರಧಾನ ಮಂತ್ರಿ ಜನಧನ’ ಯೋಜನೆಗೆ ಆರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಅವರು, ಈ ಯೋಜನೆಯಿಂದಾಗಿ ಬ್ಯಾಂಕ್‌ ಖಾತೆಗಳಿಂದ ದೂರ ಉಳಿದಿದ್ದ ಕೋಟ್ಯಂತರ ಜನರು ಬ್ಯಾಂಕ್‌ ಖಾತೆಯನ್ನು ಹೊಂದಲು ಸಾಧ್ಯವಾಗಿದೆ. ಈ ಯೋಜನೆ ಗ್ರಾಮೀಣ ಭಾಗದ ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿದೆ. ಈ ಯೋಜನೆಯಿಂದ ಸರ್ಕಾರದ ಅನೇಕ ಜನ ಕಲ್ಯಾಣ ಯೋಜನೆಗಳನ್ನು ನೇರವಾಗಿ ಜನರ ಬಳಿಗೆ ಕೊಂಡೊಯ್ಯಲು ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.

ಅಂಕಿ ಅಂಶಗಳ ಗ್ರಾಫಿಕ್ಸ್‌ನೊಂದಿಗೆ ಯೋಜನೆಯ ಬೆಳವಣಿಗೆಯನ್ನು ಹಂಚಿಕೊಂಡಿರುವ ಪ್ರಧಾನಿಯವರು, ’ಇಲ್ಲಿಯವರೆಗೂ ಜನಧನ್ ಯೋಜನೆಯಡಿ 40 ಕೋಟಿಗೂ ಹೆಚ್ಚು ಮಂದಿ ಬ್ಯಾಂಕ್ ಖಾತೆ ತೆರೆದಿದ್ದಾರೆ. ಇದರಲ್ಲಿ ಶೇ 63ರಷ್ಟು ಫಲಾನುಭವಿಗಳು ಗ್ರಾಮೀಣ ಪ್ರದೇಶದವರಾಗಿದ್ದರೆ, ಶೇ 55ರಷ್ಟು ಮಹಿಳೆಯರಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.