ಗೊಂಡಾ: ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನಿಂದ ಪ್ರಭಾವಿತರಾದ ಮುಸ್ಲಿಂ ಮಹಿಳೆಯೊಬ್ಬರು ತನ್ನ ನವಜಾತ ಶಿಶುವಿಗೆ ‘ನರೇಂದ್ರ ದಾಮೋದರದಾಸ್ ಮೋದಿ’ ಎಂದು ನಾಮಕರಣ ಮಾಡಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ಆ ಕುಟುಂಬ ಮಗುವಿನ ಹೆಸರನ್ನು ಮೊಹಮ್ಮದ್ ಅಲ್ತಾಫ್ ಆಲಂ ಮೋದಿ ಎಂದು ಬದಲಿಸಿರುವುದಾಗಿ ಟೈಮ್ಸ್ ನೌ ನ್ಯೂಸ್ ಡಾಟ್ ಕಾಂವರದಿ ಮಾಡಿದೆ.
ಮೇ 23 ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ದಿನ ಹುಟ್ಟಿದ ಕಾರಣ ಮಗುವಿಗೆ ಮೋದಿ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈಗ ಮಗುವಿನ ಜನ್ಮ ದಿನಾಂಕದ ಬಗ್ಗೆಯೂ ಗೊಂದಲವಿದೆ.ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಟುಂಬದ ಕೆಲವು ಸದಸ್ಯರು ನಿರಾಕರಿಸಿದ್ದಾರೆ ಎಂದು ಮಗುವಿನ ಅಮ್ಮ ಮೆಹನಾಜ್ ಬೇಗಂ ಹೇಳಿದ್ದಾರೆ.
ಇನ್ನಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಮಗುವಿನ ಹೆಸರನ್ನು ಬದಲಿಸಿದ್ದೇವೆ. ಹೆಸರಿನೊಂದಿಗೆ ಮೋದಿ ಎಂಬ ಪದವೂ ಇದೆ ಎಂದಿದ್ದಾರೆ ಮೆಹನಾಜ್.ಈ ಕುಟುಂಬ ಮೋದಿಯ ಅಭಿಮಾನಿಗಳಾಗಿದ್ದ ಕಾರಣ ಮಗುವಿಗೆ ಮೋದಿ ಎಂದು ಹೆಸರಿಟ್ಟಿದ್ದರು.
ಮಗು ಮೇ.23ರಂದು ಹುಟ್ಟಿರುವ ಕಾರಣ ಮೋದಿ ಎಂಬ ನಾಮಕರಣ ಮಾಡಲಾಗಿದೆ ಅಂತಾರೆ ಮಗುವಿನ ಅಮ್ಮ.ಆದರೆ ಈ ಮಗು ಮೇ 12ರಂದು ಹುಟ್ಟಿದ್ದು, ಜನಪ್ರಿಯತೆಗಾಗಿ ಮೆಹನಾಜ್ ಮಗುವಿನ ಜನ್ಮದಿನಾಂಕವನ್ನು ಬದಲಿಸಿದ್ದಾರೆ ಎಂದು ಆಸ್ಪತ್ರೆಯವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.