ADVERTISEMENT

ವಿಡಿಯೊ|ಮಾಮಲ್ಲಪುರಂ ಸಮುದ್ರ ತೀರದಲ್ಲಿ 30 ನಿಮಿಷ ಪ್ಲಾಸ್ಟಿಕ್‌ ಕಸ ಹೆಕ್ಕಿದ ಮೋದಿ

ಸ್ವಚ್ಛತಾ ಅಭಿಯಾನ 

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 5:36 IST
Last Updated 12 ಅಕ್ಟೋಬರ್ 2019, 5:36 IST
ಮಾಮಲ್ಲಪುರಂ ಸಮುದ್ರ ತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ
ಮಾಮಲ್ಲಪುರಂ ಸಮುದ್ರ ತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ    

ಮಾಮಲ್ಲಪುರಂ: ಶುಕ್ರವಾರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದ್ದ ಪ್ರಧಾನಿ ಮೋದಿ, ಶನಿವಾರ ಬೆಳಿಗ್ಗೆ ಮಾಮಲ್ಲಪುರಂನಲ್ಲಿ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು.

ಸುಮಾರು 30 ನಿಮಿಷ ಸಮುದ್ರ ತೀರದಲ್ಲಿ ವಾಯುವಿಹಾರದಜತೆಗೆ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಹಾಗೂ ಇತರೆ ಕಸವನ್ನು ಚೀಲದಲ್ಲಿ ಸಂಗ್ರಹಿಸುವ ಚಟುವಟಿಕೆ(ಪ್ಲಾಗಿಂಗ್‌)ಯನ್ನು ಪ್ರಧಾನಿ ಮೋದಿ ಮಾಡಿದರು. ‘ಪ್ಲಾಗಿಂಗ್‌‘ಎಂದರೆ, ಜಾಗಿಂಗ್‌ ಮಾಡುತ್ತ ಪ್ಲಾಸ್ಟಿಕ್‌ ಕಸವನ್ನು ಹೆಕ್ಕುವುದು.

ಅವರು ಕಸದ ಸಂಗ್ರಹದ ಚೀಲವನ್ನು ಹೊಟೇಲ್‌ ಸಿಬ್ಬಂದಿ ಜಯರಾಜ್‌ ಅವರಿಗೆ ಒಪ್ಪಿಸಿದ್ದಾಗಿ ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ತೀರದ ಮರಳಿನ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್‌ ಬಾಟಲಿಗಳು, ಮರಳಿನಲ್ಲಿ ಹುದುಗಿದ್ದ ಪ್ಲಾಸ್ಟಿಕ್‌ ಚೀಲಗಳು ಹಾಗೂ ಚಪ್ಪಲಿಎಳೆದು ತೆಗೆದು ದೊಡ್ಡ ಪ್ಲಾಸ್ಟಿಕ್‌ ಚೀಲದೊಳಗೆ ತುಂಬಿಕೊಳ್ಳುತ್ತ ನಡೆದರು. ವಾಕಿಂಗ್‌ ಜತೆಗೆ ಕಸವನ್ನು ಸಂಗ್ರಹಿಸುತ್ತ ತುಂಬಿದ ಚೀಲವನ್ನು ಹೆಗಲ ಮೇಲೆ ಹೊತ್ತು ಹೊಟೇಲ್‌ ಸಿಬ್ಬಂದಿಗೆ ನೀಡಿದ್ದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

’ನಮ್ಮ ಸಾರ್ವಜನಿಕ ಸ್ಥಳಗಳು ಶುಚಿಯಾಗಿರುವಂತೆ ಗಮನಿಸಿಕೊಳ್ಳಬೇಕು ಹಾಗೇ ನಮ್ಮ ಆರೋಗ್ಯವನ್ನು ದೃಢವಾಗಿರಿಸಿಕೊಳ್ಳಬೇಕು‘ ಎಂಬ ಸಂದೇಶ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.