ADVERTISEMENT

ಕಾಡಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ: ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2024, 5:24 IST
Last Updated 31 ಅಕ್ಟೋಬರ್ 2024, 5:24 IST
<div class="paragraphs"><p>ಕೆವಾಡಿಯಲ್ಲಿ ಪ್ರಧಾನಿ ಮೋದಿ ಭಾಷಣ</p></div>

ಕೆವಾಡಿಯಲ್ಲಿ ಪ್ರಧಾನಿ ಮೋದಿ ಭಾಷಣ

   

– ಪಿಟಿಐ ಚಿತ್ರ

ಕೆವಾಡಿಯಾ (ಗುಜರಾತ್‌): ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಡುಗಳಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ಆದರೆ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ADVERTISEMENT

ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನದ ಪರೇಡ್‌ನಲ್ಲಿ ಮಾತನಾಡಿದ ಅವರು, ‘ಅವರು (ನಗರ ನಕ್ಸಲರು) ಅಭಿವೃದ್ಧಿ ಭಾರತದ ವಿರುದ್ಧವಾಗಿ ಜನರನ್ನು ಜಾತಿ ಆಧಾರದಲ್ಲಿ ಒಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಒಗ್ಗಟ್ಟಾಗಿರುವುದರಿಂದ ನಾವೆಲ್ಲಾ ಸುರಕ್ಷಿತವಾಗಿರುತ್ತೇವೆ ಎಂದು ಹೇಳುವವರನ್ನು ನಗರ ನಕ್ಸಲರು ಗುರಿಯಾಗಿಸುತ್ತಾರೆ’ ಎಂದು ನುಡಿದಿದ್ದಾರೆ.

‘ಸರ್ಕಾರದ ಪ್ರಯತ್ನದಿಂದಾಗಿ ನಕ್ಸಲಿಸಂ ದೇಶದಲ್ಲಿ ಕೊನೆಯುಸಿರೆಳೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.

ಭಾಷಣಕ್ಕೂ ಮುನ್ನ, ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಏಕತಾ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.