ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ವೆಬ್‍ಸೈಟ್ ಹ್ಯಾಕ್ ಆಗಿದ್ದು, ಅನಾಮಿಕ ಮೂಲವೊಂದು ಟೆಕ್ಸ್ಟ್ ಫೈಲ್‍ನ್ನು ಅಪ್‍ಲೋಡ್ ಮಾಡಿದೆ ಎಂದು ಈಲಿಯಟ್ ಆಲ್ಡರ್ಸನ್ ಎಂಬ ಫ್ರೆಂಚ್ ಸೆಕ್ಯುರಿಟಿ ತಜ್ಞ ಟ್ವೀಟಿಸಿದ್ದಾರೆ.
ಈ ಟೆಕ್ಸ್ಟ್ ಫೈಲ್‍ನಲ್ಲಿ ಈಲಿಯಟ್ (@fs0c131y) ಅವರ ಹೆಸರಿದ್ದು, ವೆಬ್‍ಸೈಟ್ ಹ್ಯಾಕ್ ಆಗಿರುವ ಬಗ್ಗೆ ಹ್ಯಾಕರ್ತಮಗೆ ತಿಳಿಸಿದ್ದಾರೆ. ಹ್ಯಾಕ್ ಮಾಡಿದ ಅನಾಮಿಕ ಮೂಲವು ವೆಬ್‍ಸೈಟ್‍ನಲ್ಲಿರುವ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದೆ ಎಂದು ಈಲಿಯಟ್ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಮೋದಿಯವರನ್ನು ಟ್ಯಾಗ್ ಮಾಡಿರುವ ಈಲಿಯಟ್, ತಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿದರೆ, ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.