ವಾಷಿಂಗ್ಟನ್: ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ‘ದಿ ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್’(ಎಲ್‌ಆರ್‌ಒ) ಉಪಗ್ರಹ ಸೆರೆಹಿಡಿದಿರುವ ಚಂದ್ರನ ದಕ್ಷಿಣ ಧ್ರುವದ ಇತ್ತೀಚಿನ ಚಿತ್ರಗಳಲ್ಲೂ, ಚಂದ್ರಯಾನ–2ರ ‘ವಿಕ್ರಮ್’ ಲ್ಯಾಂಡರ್ ಗೋಚರಿಸಿಲ್ಲ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬುಧವಾರ ತಿಳಿಸಿದೆ.
ಸೆಪ್ಟೆಂಬರ್ 7ರಂದುದಕ್ಷಿಣ ದ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸುವ ಪ್ರಕ್ರಿಯೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ನಡೆಸಿತ್ತು. ಆದರೆ ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿ.ಮೀ. ಎತ್ತರದಲ್ಲಿರಬೇಕಾದರೆವಿಕ್ರಮ್ ಲ್ಯಾಂಡರ್ ಜತೆಗಿನ ಸಂಪರ್ಕ ಕಡಿತವಾಗಿತ್ತು.
‘ಅಕ್ಟೋಬರ್ 14ರಂದು ದಕ್ಷಿಣ ದ್ರುವದಲ್ಲಿ ಉಪಗ್ರಹ ಹಾದುಹೋಗಿದ್ದು, ವಿಕ್ರಮ್ ಲ್ಯಾಂಡರ್ ಇಳಿಯಬೇಕಿದ್ದ ಸ್ಥಳದ ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರಗಳನ್ನು ಕ್ಯಾಮೆರಾ ತಂಡ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದು,ಲ್ಯಾಂಡರ್ ಪತ್ತೆಯಾಗಿಲ್ಲ’ ಎಂದು ಎಲ್‌ಆರ್‌ಒ ಮಿಷನ್‌ನ ಯೋಜನಾ ವಿಜ್ಞಾನಿ ನೋವಾ ಎಡ್ವರ್ಡ್ ಪೆಟ್ರೊ ಪಿಟಿಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.