ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರು ಭಾನುವಾರ ಪಕ್ಷದ ಅಧ್ಯಕ್ಷ ಫರೂಕ್ ಅಬ್ದುಲ್ಲಾ ಮತ್ತು ಅವರ ಪತ್ನಿಯನ್ನು ಶ್ರೀನಗರದ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಪಕ್ಷದ ನಿಯೋಗವು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರನ್ನು ಹರಿ ನಿವಾಸ್‌ದಲ್ಲಿ ಭೇಟಿ ಮಾಡಿದೆ. 370ನೇ ವಿಧಿಯನ್ನು ಕೇಂದ್ರಸರ್ಕಾರ ರದ್ದು ಮಾಡಿದಂದಿನಿಂದ ಅಂದರೆ ಆಗಸ್ಟ್ 5ರ ನಂತರ ಒಮರ್ ಅಬ್ದುಲ್ಲಾ ಮತ್ತು ಫರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿರಿಸಲಾಗಿತ್ತು.
ಇದನ್ನೂ ಓದಿ:ಅಬ್ಧುಲ್ಲಾ ಭೇಟಿಗೆ ನ್ಯಾಷನಲ್ ಕಾನ್ಫರೆನ್ಸ್‌ಪಕ್ಷದ ನಿಯೋಗಕ್ಕೆಅನುಮತಿ
ನ್ಯಾಷನಲ್ ಕಾನ್ಫರೆನ್ಸ್ ಪ್ರಾಂತೀಯ ಅಧ್ಯಕ್ಷ ದೇವೇಂದ್ರ ಸಿಂಗ್ ರಾಣಾ ಮತ್ತು ಶಾಸಕರ ತಂಡವು ಭಾನುವಾರ ಬೆಳಗ್ಗೆ ಶ್ರೀನಗರಕ್ಕೆ ತಲುಪಿತ್ತು. ನಾಯಕರಿಬ್ಬರೂ ಚೆನ್ನಾಗಿದ್ದಾರೆ. ಅದೇ ವೇಳೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಇಬ್ಬರೂ ನೊಂದುಕೊಂಡಿದ್ದಾರೆ. ರಾಜ್ಯದಲ್ಲಿ ರಾಜಕೀಯ ಪ್ರಕ್ರಿಯೆಗಳು ನಡೆಯಬೇಕಾದರೆ ಪ್ರಮುಖ ನಾಯಕರನ್ನು ಬಂಧಮುಕ್ತಗೊಳಿಸಬೇಕೆಂದು ರಾಣಾ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:ಕಾಶ್ಮೀರದ ನಾಯಕರನ್ನು ಒಬ್ಬರ ನಂತರ ಮತ್ತೊಬ್ಬರು ಎಂಬಂತೆ ಬಂಧಮುಕ್ತ ಮಾಡಲಾಗುವುದು'
2 ತಿಂಗಳುಗಳ ಕಾಲ ಗೃಹ ಬಂಧನದಲ್ಲಿದ್ದ ಫರೂಕ್ ಅಬ್ದುಲ್ಲಾ ಶನಿವಾರ ಮನೆಯಿಂದ ಹೊರಗೆ ಬಂದಿದ್ದರು. ಫರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಲು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಿಯೋಗಕ್ಕೆ ಅನುಮತಿ ನೀಡಬೇಕು ಎಂದು ನಾಯಕರು ಗುರುವಾರ ರಾಜ್ಯಪಾಲ ಮಲಿಕ್ ಅವರಿಗೆ ಮನವಿ ಸಲ್ಲಿಸಿದ್ದರು. ಜಮ್ಮುನಲ್ಲಿ ಬಂಧಿತರಾಗಿದ್ದ ಎಲ್ಲ ನಾಯಕರನ್ನು ಹಂತಹಂತವಾಗಿ ಬಂಧಮುಕ್ತಗೊಳಿಸಲಾಗುವುದು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸಲಹೆಗಾರ ಫರೂಕ್ ಖಾನ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.