ADVERTISEMENT

ತ್ರಿಪುರದಲ್ಲಿ ಆರಂಭವಾಗಲಿದೆ ರಾಷ್ಟ್ರೀಯ ನಾಟಕ ಶಾಲೆಯ ನೂತನ ಕ್ಯಾಂಪಸ್

ಪಿಟಿಐ
Published 28 ಸೆಪ್ಟೆಂಬರ್ 2023, 6:35 IST
Last Updated 28 ಸೆಪ್ಟೆಂಬರ್ 2023, 6:35 IST
   

ಅಗರ್ತಲಾ: ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ಕ್ಯಾಂಪಸ್‌ ಸ್ಥಾಪನೆಗಾಗಿ ತ್ರಿಪುರ ಸರ್ಕಾರವು 2.36 ಎಕರೆ ಜಾಗವನ್ನು ಮಂಜೂರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ತ್ರಿಪುರ ಜಿಲ್ಲೆಯ ರಾಣಿಬಜಾರ್‌ನಲ್ಲಿ ಈ ಕ್ಯಾಂಪಸ್‌ ತಲೆ ಎತ್ತಲಿದೆ. ಈ ಕುರಿತಂತೆ ತ್ರಿಪುರ ಸರ್ಕಾರ ಮತ್ತು ಎನ್‌ಎಸ್‌ಡಿ ನಡುವೆ ಒಡಂಬಡಿಕೆ ನಡೆದಿದೆ.

‘ಎನ್‌ಎಸ್‌ಡಿ ಕೋರಿಕೆಯಂತೆ ರಾಜ್ಯ ಸರ್ಕಾರವು ಜಾಗ ಮಂಜೂರು ಮಾಡಿದೆ. ಈ ಕುರಿತಂತೆ ಒಡಂಬಡಿಕೆಯೂ ಆಗಿದೆ’ ಎಂದು ಎನ್‌ಎಸ್‌ಡಿ ಅಗರ್ತಲಾ ಕೇಂದ್ರದ ಕಾರ್ಯಕ್ರಮ ಸಂಯೋಜಕ ಸುಭೀರ್ ರಾಯ್‌ ತಿಳಿಸಿದ್ದಾರೆ.

ADVERTISEMENT

‘ಮೊದಲು ಜಾಗದ ಖಾತೆ ಬದಲಾವಣೆ ಮಾಡಿಕೊಳ್ಳಲಾಗುವುದು. ನಂತರ ಎನ್‌ಎಸ್‌ಡಿ ಕೇಂದ್ರದ ಕಾಮಗಾರಿ ಆರಂಭಿಸಲಾಗುವುದು. ಅಲ್ಲಿಯವರೆಗೆ ನಝ್ರುಲ್‌ ಕಲಾಕ್ಷೇತ್ರದಲ್ಲಿ ಎನ್‌ಎಸ್‌ಡಿ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಲಿದೆ’ ಎಂದು ತಿಳಿಸಿದರು.

‘ಸದ್ಯ ಅಗರ್ತಲಾ ಕೇಂದ್ರದಲ್ಲಿ ನಾಟಕ ಶಿಕ್ಷಣ ಕುರಿತ ಒಂದು ವರ್ಷ ಅವಧಿಯ ಕೋರ್ಸ್‌ ಆರಂಭಿಸಲಾಗಿದೆ. ಇದನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗುವುದು. ಸದ್ಯ ಇಲ್ಲಿ 20 ವಿದ್ಯಾರ್ಥಿಗಳು ಇದ್ದಾರೆ’ ಎಂದೂ ರಾಯ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.