ನವದೆಹಲಿ: ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ– ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶನಿವಾರ ಪ್ರಕಟಿಸಿದ್ದು, 22,000ಕ್ಕೂ ಹೆಚ್ಚು ವಿದ್ಯಾರ್ಥಿಗಳು 100 ಪರ್ಸೆಂಟೈಲ್ ಗಳಿಸಿದ್ದಾರೆ.
ಇಂಗ್ಲಿಷ್‌ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ಜೀವ ವಿಜ್ಞಾನ ಮತ್ತು ಅರ್ಥಶಾಸ್ತ್ರ ಇದೆ. ಸಿಯುಇಟಿ–ಯುಜಿ ಎರಡನೇ ಆವೃತ್ತಿಯ ಪ್ರವೇಶ ಪರೀಕ್ಷೆಗೆ ದೇಶದಾದ್ಯಂತ 11.11 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.
ಇಂಗ್ಲಿಷ್‌ನಲ್ಲಿ 5,685 ಅಭ್ಯರ್ಥಿಗಳು 100 ಪರ್ಸೆಂಟೈಲ್ ಅಂಕಗಳನ್ನು ಪಡೆದಿದ್ದರೆ, ಜೀವ ವಿಜ್ಞಾನ/ ಜೈವಿಕ ತಂತ್ರಜ್ಞಾನ/ ಬಯೋ ಕೆಮಿಸ್ಟ್ರಿ ವಿಷಯಗಳಲ್ಲಿ 4,850 ಹಾಗೂ ಅರ್ಥಶಾಸ್ತ್ರದಲ್ಲಿ 2,836 ಅಭ್ಯರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ.
ಸಿಯುಇಟಿ ದೇಶದ ಎರಡನೇ ಅತಿದೊಡ್ಡ ಪ್ರವೇಶ ಪರೀಕ್ಷೆಯಾಗಿದೆ. ಇದರ ಮೊದಲ ಆವೃತ್ತಿಯಲ್ಲಿ 12.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.