ಭುವನೇಶ್ವರ್: ಒಡಿಶಾ ಮುಖ್ಯಮಂತ್ರಿಯಾಗಿ ನವೀನ್ ಪಟ್ನಾಯಕ್ ಬುಧವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಈ ಮೂಲಕ ಸತತ ಐದನೇ ಅವಧಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಟ್ನಾಯಕ್ ಪಾತ್ರರಾಗಿದ್ದಾರೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ಮತ್ತು ಸಿಕ್ಕಿಂನಲ್ಲಿ ಪವನ್ ಚಾಮ್ನಿಂಗ್ ಸತತ ಐದು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 10,000ಕ್ಕಿಂತಲೂ ಹೆಚ್ಚು ಮಂದಿ ಭಾಗಿಯಾಗಿದ್ದರು. ನವೀನ್ ಪಟ್ನಾಯಕ್ ಜತೆ 20 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಇದರಲ್ಲಿ 10 ಮಂದಿ ಮೊದಲ ಬಾರಿ ಸಚಿವ ಸ್ಥಾನ ಗಳಿಸಿಕೊಂಡವರಾಗಿದ್ದಾರೆ.
ಪಟ್ನಾಯಿಕ್ ಶಿಫಾರಸು ಮೇರೆಗೆ ಒಡಿಶಾ ರಾಜ್ಯಪಾಸಗಣೇಶಿ ಲಾಲ್ ಮಂಗಳವಾರ ಸಂಜೆ ಸಂಪುಟ ಸಚಿವರನ್ನು ಮತ್ತು 9 ಸಚಿವರನ್ನು ನೇಮಕ ಮಾಡಿದ್ದರು.
ಪ್ರಧಾನಿ ಅಭಿನಂದನೆ
ಒಡಿಶಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನವೀನ್ ಪಟ್ನಾಯಕ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಜನರ ಆಕಾಂಕ್ಷೆಗಳನ್ನು ನೆರವೇರಿಸಿದ ನಿಮಗೂ ನಿಮ್ಮ ತಂಡಕ್ಕೂ ಶುಭ ಹಾರೈಕೆಗಳು. ಒಡಿಶಾದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರದಭರವಸೆಯನ್ನು ನಾನುನೀಡುತ್ತೇನೆ ಎಂದು ಮೋದಿ ಟ್ವೀಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.