ADVERTISEMENT

ಕ್ಯಾನ್ಸರ್ ಡಯೆಟ್: ಸ್ಪಷ್ಟನೆ ನೀಡಿದ ನವಜೋತ್‌ ಸಿಂಗ್‌ ಸಿಧು

ಪಿಟಿಐ
Published 25 ನವೆಂಬರ್ 2024, 16:22 IST
Last Updated 25 ನವೆಂಬರ್ 2024, 16:22 IST
ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಮತ್ತು ಪತ್ನಿ ನವಜೋತ್‌ ಕೌರ್‌ ಸಿಧು 
ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಮತ್ತು ಪತ್ನಿ ನವಜೋತ್‌ ಕೌರ್‌ ಸಿಧು    

ಚಂಡೀಗಢ: ಕಟ್ಟುನಿಟ್ಟಾದ ಡಯಟ್‌ನಿಂದಾಗಿ ತಮ್ಮ ಪತ್ನಿ ಕೌರ್‌ ಸಿಧು ಅವರು ನಾಲ್ಕನೇ ಹಂತದ ಕ್ಯಾನ್ಸರ್‌ ವಿರುದ್ಧ ಹೋರಾಡಲು ನೆರವಾಯಿತು ಎಂದಿದ್ದ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರು ಸೋಮವಾರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ವೈದ್ಯರ ಸಲಹೆಯಂತೆ ಡಯಟ್ ಮಾಡಲಾಗುತ್ತಿತ್ತು. ಇದರ ಜೊತೆಗೆ ಚಿಕಿತ್ಸೆಯನ್ನೂ ಪರಿಗಣಿಸಲಾಗಿತ್ತು ಎಂದು ಹೇಳಿದ್ದಾರೆ.

ಸಿಧು ಅವರು ನವೆಂಬರ್‌ 21ರಂದು ಅಮೃತಸರದಲ್ಲಿ ನೀಡಿದ್ದ ಹೇಳಿಕೆಯನ್ನು ಟಾಟಾ ಮೆಮೊರಿಯಲ್‌ ಆಸ್ಪತ್ರೆಯ ಕ್ಯಾನ್ಸರ್ ತಜ್ಞರೊಬ್ಬರು ಪ್ರಶ್ನಿಸಿದ್ದರು.

ADVERTISEMENT

ಹೀಗಾಗಿ ಸೋಮವಾರ ‘ಎಕ್ಸ್‌’ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಸಿಧು ಅವರು, ‘ನನಗೆ ವೈದ್ಯರು ದೇವರು ಇದ್ದಂತೆ. ವೈದ್ಯರೇ ನನ್ನ ಮೊದಲ ಆದ್ಯತೆ. ಮನೆಯಲ್ಲಿಯೇ ವೈದ್ಯರಿದ್ದಾರೆ (ನವಜೋತ್‌ ಕೌರ್‌ ಸಿಧು). ಆರೋಗ್ಯ ವಿಚಾರದಲ್ಲಿ ವೈದ್ಯರ ಸಲಹೆ ಪಡೆದೇ ಮುಂದಿನ ಹೆಜ್ಜೆ ಇಡುತ್ತೇನೆ’ ಎಂದು ಹೇಳಿದ್ದಾರೆ.

‘ಕ್ಯಾನ್ಸರ್‌ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನನ್ನ ಪತ್ನಿ ಶಸ್ತ್ರಚಿಕಿತ್ಸೆ, ಕಿಮೊಥೆರಪಿ ಮುಂತಾದ ಚಿಕಿತ್ಸೆ ಪಡೆದಿದ್ದಾರೆ. ಜೊತೆಗೆ ಭಾರತದ ಆಯುರ್ವೇದದಿಂದ ಸ್ಫೂರ್ತಿ ಪಡೆದ ಕಟ್ಟುನಿಟ್ಟಾದ ಡಯೆಟ್ ಅನುಸರಿಸಿದ್ದರು’ ಎಂದು ತಿಳಿಸಿದ್ದಾರೆ.

ಕೌರ್‌ ಅವರು ಅನುಸರಿಸಿದ ಡಯಟ್ ಯೋಜನೆಯನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.