ಚಂಡೀಗಡ: ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕ್ಷಮೆಯಾಚಿಸಿದ್ದಾರೆ.
ಧಾರ್ಮಿಕ ಚಿಹ್ನೆವುಳ್ಳ ಶಾಲು ಧರಿಸುವ ಮೂಲಕ ಸಿಖ್ ಸಮುದಾಯದ ಭಾವನೆಗೆ ಧಕ್ಕೆ ಮಾಡಿರುವುದರಿಂದ ಸಿಧು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಅಕಾಲ್ ತಖ್ತ್ ಜಾಥೆದಾರ್ ಗಿಯಾನಿ ಹರಪ್ರೀತ್ ಸಿಂಗ್ ಆಗ್ರಹಿಸಿದ್ದರು.
ಇದೊಂದು ದುರದೃಷ್ಟಕರ ಮತ್ತು ಸಿಖ್ ಸಂಪದ್ರಾಯಕ್ಕೆ ವಿರುದ್ಧವಾಗಿದೆ. ಈ ಬಗ್ಗೆ ಸಮುದಾಯದ ಹಲವರು ನನಗೆ ದೂರು ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದರು.
‘ಶ್ರೀ ಅಕಾಲ್ ತಖ್ತ್ ಜಾಥೆದಾರ್ ಸರ್ವೋಚ್ಛ ಸ್ಥಾನದಲ್ಲಿದ್ದಾರೆ. ಗೊತ್ತಿಲ್ಲದೆಯೇ ಯಾವುದೇ ಒಬ್ಬ ಸಿಖ್ ವ್ಯಕ್ತಿಯ ಭಾವನೆಗೆ ಧಕ್ಕೆ ಮಾಡಿದ್ದರೂ ನಾನು ಕ್ಷಮೆಯಾಚಿಸುತ್ತೇನೆ’ ಎಂದು ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಜಲಂಧರ್‌ನಲ್ಲಿ ರೈತರ ಜತೆ ನಡೆಸಿದ ಸಭೆಯ ಸಂದರ್ಭದಲ್ಲಿ ಸಿಧು ಅವರು, ಸಿಖ್ ಧಾರ್ಮಿಕ ಚಿಹ್ನೆವುಳ್ಳ ಶಾಲು ಧರಿಸಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.