ನವದೆಹಲಿ: ‘ದೇಶದ ಬಜೆಟ್‌ನಲ್ಲಿ ರಕ್ಷಣೆಗೆ ವಿನಿಯೋಗಿಸುತ್ತಿರುವ ಮೊತ್ತದಲ್ಲಿ ನೌಕಾಪಡೆಯ ಪಾಲು ಪ್ರತಿ ವರ್ಷ ಕಡಿಮೆಯಾಗುತ್ತಿದೆ. ಆದರೆ, ಚೀನಾ ತನ್ನ ನೌಕಾಪಡೆಯ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ. ನಮಗೆ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ’ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮಬೀರ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.
ಬುಧವಾರ ನೌಕಾಪಡೆಯ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ. ಈ ಸಲುವಾಗಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತು ಹೇಳಿದ್ದಾರೆ.
‘ನಮಗೆ ದೊರೆಯುತ್ತಿರುವ ಅನುದಾನದಲ್ಲೇ ನೌಕಾಪಡೆಯನ್ನು ಆಧುನೀಕರಣಗೊಳಿಸುತ್ತಿದ್ದೇವೆ. ಆದರೆ, ಈಗ ನೀಡಿರುವ ಅನುದಾನ ಸಾಲುವುದಿಲ್ಲ. ಮುಂದಿನ ಬಜೆಟ್‌ನಲ್ಲಿ ನಮ್ಮ ಪಾಲನ್ನು ಹೆಚ್ಚಿಸಬೇಕು’ ಎಂದು ಅವರು ಹೇಳಿದ್ದಾರೆ.
*18 % - 2012–13ನೇ ಸಾಲಿನಲ್ಲಿ ರಕ್ಷಣೆಗೆ ಮೀಸಲಿರಿಸಿದ್ದ ಅನುದಾನದಲ್ಲಿ ನೌಕಾಪಡೆ ಪಾಲು
*13 % - 2019–20ನೇ ಸಾಲಿನಲ್ಲಿರಕ್ಷಣೆಗೆ ಮೀಸಲಿರಿಸಿದ್ದ ಅನುದಾನದಲ್ಲಿ ನೌಕಾಪಡೆ ಪಾಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.