ಕೊಚ್ಚಿ: ಲಕ್ಷದ್ವೀಪದ ಅಗತ್ತಿ ದ್ವೀಪದಲ್ಲಿ ಗುರುವಾರ ತೀವ್ರ ಅನಾರೋಗ್ಯದಿಂದ ಗಂಭೀರವಾಗಿದ್ದ ನಾಲ್ವರಿಗೆ ತುರ್ತು ವೈದ್ಯಕೀಯ ನೆರವು ನೀಡಿರುವುದಾಗಿ ಸೇನೆ ತಿಳಿಸಿದೆ.
ಅಗತ್ತಿಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಗಂಭೀರವಾಗಿದ್ದು, ನೆರವು ನೀಡುವಂತೆ ಸ್ಥಳೀಯ ಆಡಳಿತ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆಗಳು ಜಂಟಿ ಕಾರ್ಯಾಚರಣೆ ಕೈಗೊಂಡು ರೋಗಿಗಳನ್ನು ಸುರಕ್ಷಿತವಾಗಿ ಕೊಚ್ಚಿಗೆ ಕರೆತಂದು, ಆಸ್ಪತ್ರೆಗೆ ದಾಖಲಿಸಿವೆ. ಅರಬ್ಬಿ ಸಮುದ್ರದಲ್ಲಿ ನೈರುತ್ಯ ಮುಂಗಾರಿನ ಪ್ರತಿಕೂಲ ಹವಾಮಾನದ ನಡುವೆಯೂ ನೌಕಾಪಡೆಯ ಡಾರ್ನಿಯರ್ ವಿಮಾನವನ್ನು ಬಳಸಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನೆಯು ಪ್ರಕಟಣೆಯಲ್ಲಿ ಹೇಳಿದೆ.
ಎಲ್ಲಿಯೇ ಆಗಲಿ, ಯಾವುದೇ ಸಮಯದಲ್ಲಿಯೇ ಆಗಲಿ ಸಂಕಷ್ಟದಲ್ಲಿರುವವರಿಗೆ ತುರ್ತು ಸಹಾಯ ನೀಡುವ ವಿಚಾರವಾಗಿ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆಯ ಬದ್ಧತೆಯನ್ನು ಈ ಕಾರ್ಯಾಚರಣೆಯು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.