ADVERTISEMENT

ನಕ್ಸಲ್ ಹಿಂಸಾಚಾರದ ಪ್ರಮಾಣ ಶೇ 77ರಷ್ಟು ಇಳಿಕೆ: ಲೋಕಸಭೆಗೆ ಮಾಹಿತಿ ನೀಡಿದ ಸಚಿವ

ಲೋಕಸಭೆಗೆ ಮಾಹಿತಿ ನೀಡಿದ ಸಚಿವ ನಿತ್ಯಾನಂದ ರೈ

ಪಿಟಿಐ
Published 15 ಮಾರ್ಚ್ 2022, 13:24 IST
Last Updated 15 ಮಾರ್ಚ್ 2022, 13:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ದೇಶದಲ್ಲಿ ನಕ್ಸಲ್ ಹಿಂಸಾಚಾರದ ಪ್ರಮಾಣವು ಶೇ 77ರಷ್ಟು ಇಳಿಕೆಯಾಗಿದೆ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಗೆ ತಿಳಿಸಿದರು.

‘2009ರಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ 2,258 ನಕ್ಸಲ್ ಹಿಂಸಾಚಾರ ಘಟನೆಗಳು ನಡೆದಿದ್ದರೆ, 2021ರಲ್ಲಿ ಈ ಘಟನೆಗಳ ಪ್ರಮಾಣ 509ಕ್ಕೆ ಇಳಿಕೆಯಾಗಿದೆ. 2015ರಲ್ಲಿ ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸಲು ಕೇಂದ್ರ ಸರ್ಕಾರವು ರೂಪಿಸಿದ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಗಳು ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಪೂರಕವಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ನಕ್ಸಲ್ ಹಿಂಸಾಚಾರದ ಪರಿಣಾಮ ಸಾವಿಗೀಡಾಗುತ್ತಿದ್ದವರ ಪ್ರಮಾಣವು ಶೇ 85ರಷ್ಟು ಇಳಿಕೆಯಾಗಿದೆ. 2010ರಲ್ಲಿ 1,005 ಮಂದಿ ಹಾಗೂ 2021ರಲ್ಲಿ 147 ಮಂದಿ ಸಾವಿಗೀಡಾಗಿದ್ದಾರೆ. ಇವರಲ್ಲಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ’ ಎಂದು ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.