ADVERTISEMENT

ಮಹಾರಾಷ್ಟ್ರ | ₹2 ಕೋಟಿ ಮೌಲ್ಯದ ಗಾಂಜಾ ವಶ: ನಾಲ್ವರ ಸೆರೆ

ಪುಣೆ ಮೂಲದ ಅಂತರರಾಜ್ಯ ಮಾದಕದ್ರವ್ಯ ಸಾಗಣೆ ಜಾಲ ಭೇದಿಸಿದ ಎನ್‌ಸಿಬಿ

ಪಿಟಿಐ
Published 24 ಜೂನ್ 2024, 13:38 IST
Last Updated 24 ಜೂನ್ 2024, 13:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ಅಂತರರಾಜ್ಯ ಮಾದಕದ್ರವ್ಯ ಜಾಲವನ್ನು ಭೇದಿಸಿರುವ ಮಾದಕ ವಸ್ತು ನಿಯಂತ್ರಣ ದಳವು (ಎನ್‌ಸಿಬಿ) ₹2 ಕೋಟಿ ಮೌಲ್ಯದ 111 ಕೆ.ಜಿಯಷ್ಟು ಗಾಂಜಾವನ್ನು ವಶಕ್ಕೆ ಪಡೆದಿದೆ. 

ಈ ಘಟನೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಮಾದಕ ದ್ರವ್ಯ ಸಾಗಣೆಗಾಗಿ ಬಳಸಲಾಗಿದ್ದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. 

ಪುಣೆ ಮೂಲದ ಈ ಜಾಲವು ಗಾಂಜಾ ಸೇರಿದಂತೆ ಇನ್ನಿತರ ಮಾದಕದ್ರವ್ಯಗಳನ್ನು ಒಡಿಶಾದಿಂದ ಅಕ್ರಮವಾಗಿ ಸಾಗಣೆ ಮಾಡಿ, ಮುಂಬೈ ಮತ್ತು ಪುಣೆಯಲ್ಲಿ ಹಂಚಿಕೆ ಮಾಡುತ್ತಿತ್ತು ಎಂದು ಎನ್‌ಸಿಬಿಯ ಮುಂಬೈ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ADVERTISEMENT

ನಿರಂತರ ಕಣ್ಗಾವಲಿನ ಮೂಲಕ ಈ ಮಾದಕದ್ರವ್ಯ ಸಾಗಣೆಯ ಜಾಲವನ್ನು ಪತ್ತೆಹಚ್ಚಲಾಗಿದೆ. ಆದರೆ, ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಈ ಜಾಲದ ಸದಸ್ಯರು ಜಾಗಗಳನ್ನು ಬದಲಿಸುತ್ತಿದ್ದರು. ತಮ್ಮ ಮೊಬೈಲ್ ಸಂಖ್ಯೆಗಳನ್ನು ಕೂಡ ಬದಲಿಸುತ್ತಿದ್ದರು. ಇದರಿಂದಾಗಿ ಮಾದಕದ್ರವ್ಯದ ಅಕ್ರಮ ಸಾಗಣೆದಾರರ ಬಂಧನ ಸವಾಲಾಗಿ ಪರಿಣಮಿಸಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.