ನವದೆಹಲಿ: ಮಾನವ ಸಂಪನ್ಮೂಲ ಸಚಿವಾಲಯವು (ಎಚ್‌ಆರ್‌ಡಿ) ಬುಧವಾರ ಅನಾವರಣಗೊಳಿಸಿದ ಪರ್ಯಾಯ ಶೈಕ್ಷಣಿಕ ದಿನಚರಿಯಲ್ಲಿ, ಮೊಬೈಲ್ ಅಪ್ಲಿಕೇಶನ್, ಫೋನ್, ಶೈಕ್ಷಣಿಕ ವಾಹಿನಿ ಮತ್ತು ಯೂಟ್ಯೂಬ್ ವಿಡಿಯೊಗಳು ಸ್ಥಾನ ಪಡೆದಿವೆ.
ಕೋವಿಡ್–19ನಿಂದ ಶಾಲೆಗಳು ಮುಚ್ಚಿದ್ದು, ಪರ್ಯಾಯ ಮಾರ್ಗದಲ್ಲಿ ಬೋಧನೆ ಯತ್ನದಲ್ಲಿರುವ ಶಿಕ್ಷಕರು, ಅಂಕ ಆಧರಿತ ಪರೀಕ್ಷೆಗಿಂತ ಹೆಚ್ಚಾಗಿ ಕಲಿಕೆಗೆ ಒತ್ತು ನೀಡಬೇಕು ಎಂದು ದಿನಚರಿ ಅಭಿವೃದ್ಧಿಪಡಿಸಿರುವ ಎನ್‌ಸಿಇಆರ್‌ಟಿ ಸಲಹೆ ನೀಡಿದೆ.
‘ಖುಷಿಯಿಂದ, ಆಸಕ್ತಿಕರವಾಗಿ ವಿದ್ಯಾರ್ಥಿಗಳಿಗೆ ಬೋಧಿಸಲು ನೆರವಾಗುವ ವಿವಿಧ ತಾಂತ್ರಿಕ ಪರಿಕರ ಹಾಗೂ ಸಾಮಾಜಿಕ ಮಾಧ್ಯಮ ಬಳಕೆ ಕುರಿತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮನೆಯಲ್ಲಿ ಕುಳಿತೇ ಇವುಗಳನ್ನು ಬಳಕೆ ಮಾಡಬಹುದು’ಅಂಗವಿಕಲ ವಿದ್ಯಾರ್ಥಿಗಳನ್ನೂ ಪರ್ಯಾಯ ಶೈಕ್ಷಣಿಕ ದಿನಚರಿಯಲ್ಲಿ ಪರಿಗಣಿಸಲಾಗಿದೆ. ಅವರ ಕಲಿಕೆಗೆ ಅನುಕೂಲವಾಗುವ ಆಡಿಯೊ ಪುಸ್ತಕ, ರೇಡಿಯೊ ಕಾರ್ಯಕ್ರಮ, ವಿಡಿಯೊ ಕಾರ್ಯಕ್ರಮಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.