ADVERTISEMENT

ಮಹಾರಾಷ್ಟ್ರ ಚುನಾವಣೆ: ಎನ್‌ಸಿಪಿಗೆ 90 ಸ್ಥಾನಗಳನ್ನು ನೀಡಬೇಕು ಎಂದ ಸಚಿವ ಭುಜಬಲ್‌

ಪಿಟಿಐ
Published 28 ಮೇ 2024, 3:14 IST
Last Updated 28 ಮೇ 2024, 3:14 IST
ಎನ್‌ಸಿಪಿ ಲಾಂಛನ
ಎನ್‌ಸಿಪಿ ಲಾಂಛನ   

ಮುಂಬೈ: ಇದೇ ವರ್ಷ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಗೆ 80 ರಿಂದ 90 ಸ್ಥಾನಗಳನ್ನು ನೀಡಬೇಕು ಎಂದು ಎನ್‌ಸಿಪಿ ಹಿರಿಯ ಮುಖಂಡ ಹಾಗೂ ಸಚಿವ ಛಗನ್‌ ಭುಜಬಲ್‌ ಒತ್ತಾಯಿಸಿದ್ದಾರೆ.

ಪಕ್ಷದ ಸಭೆಯಲ್ಲಿ ಮಾತನಾಡಿದ ಭುಜಬಲ್‌, ನಾವು ಮೈತ್ರಿ (ಬಿಜೆಪಿ–ಶಿವಸೇನೆ) ಸೇರಿದಾಗ ನಮಗೆ ವಿಧಾನಸಭೆಯಲ್ಲಿ ಸ್ಪರ್ಧೆ ಮಾಡಲು 80 ರಿಂದ 90 ಸ್ಥಾನಗಳನ್ನು ನೀಡಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ ನಮಗೆ ಬಹಳ ಕಡಿಮೆ ಸ್ಥಾನಗಳನ್ನು ನೀಡಲಾಗಿದೆ ಎಂದರು.

ಎನ್‌ಸಿಪಿ ವಿಧಾನಸಭೆಯಲ್ಲಿ 50 ರಿಂದ 60 ಸ್ಥಾನಗಳನ್ನು ಗೆಲ್ಲಬೇಕಾದರೆ ಹೆಚ್ಚಿನ ಸ್ಥಾನಗಳಲ್ಲಿ ನಾವು ಸ್ಪರ್ಧೆ ಮಾಡಬೇಕು. ಇದನ್ನು ನಾವು ಅವರಿಗೆ (ಬಿಜೆಪಿ–ಶಿವಸೇನೆ) ಹೇಳಬೇಕಿದೆ ಎಂದರು. 

ADVERTISEMENT

ಛಗನ್‌ ಭುಜಬಲ್‌ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ರಾಜ್ಯದಲ್ಲಿ ದೊಡ್ಡ ಪಕ್ಷವಾಗಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಹೇಳಿದ್ದಾರೆ. 

2019ರ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದಿದ್ದರೆ, ಎನ್‌ಸಿಪಿ (ಶರದ್‌–ಅಜಿತ್‌) 54 ಸ್ಥಾನಗಳನ್ನು ಗೆದ್ದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.