ADVERTISEMENT

ನಮ್ಮ ಸಹಕಾರ ಬ್ಯಾಂಕ್‌ಗೆ ಸಂಕಷ್ಟ ಎದುರಾದ ಕಾರಣ ಶರದ್ ಬಣ ತೊರೆದೆ: NCP ಶಾಸಕ

ಪಿಟಿಐ
Published 18 ಆಗಸ್ಟ್ 2024, 12:39 IST
Last Updated 18 ಆಗಸ್ಟ್ 2024, 12:39 IST
<div class="paragraphs"><p>ಶಾಸಕ ರಾಜೇಂದ್ರ ಶಿಂಗ್ನೆ</p></div>

ಶಾಸಕ ರಾಜೇಂದ್ರ ಶಿಂಗ್ನೆ

   

ಕೃಪೆ: X/@DrShingnespeaks

ನಾಗ್ಪುರ: ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ಸಂಕಷ್ಟಗಳು ಎದುರಾದ ಕಾರಣ ಶರದ್‌ ಪವಾರ್‌ ಬಣ ತೊರೆದು ಅಜಿತ್‌ ಪವಾರ್‌ ಅವರೊಂದಿಗೆ ಹೋಗಬೇಕಾಯಿತು ಎಂದು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಶಾಸಕ ರಾಜೇಂದ್ರ ಶಿಂಗ್ನೆ ಹೇಳಿದ್ದಾರೆ.

ADVERTISEMENT

ಸದ್ಯ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿರುವ ಅಜಿತ್‌ ಹಾಗೂ ಕೆಲವು ಶಾಸಕರು ಶಿವಸೇನಾ, ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕಳೆದ ವರ್ಷ ಸೇರಿಕೊಂಡರು. ಇದು ಎನ್‌ಸಿಪಿ ಇಬ್ಭಾಗವಾಗಲು ಕಾರಣವಾಯಿತು.

ಶರದ್‌ ಅವರು ಕಟ್ಟಿದ್ದ ಮೂಲ ಎನ್‌ಸಿಪಿಯನ್ನು ಅಜಿತ್‌ ಮುನ್ನಡೆಸುತ್ತಿದ್ದಾರೆ.

ಬುಲ್ಧಾನ ಜಿಲ್ಲೆಯ ಸಿಂದ್‌ಖೇಡ್‌ ರಾಜ ಕ್ಷೇತ್ರದ ಶಾಸಕ ರಾಜೇಂದ್ರ ಅವರು ವಾರ್ಧಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಅವರೊಂದಿಗೆ ವೇದಿಕೆ ಹಂಚಿಕೊಂಡರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶರದ್‌ ಪವಾರ್‌ ಅವರನ್ನು ಸದಾ ಗೌರವಿಸುತ್ತೇನೆ. ಅವರ ನಾಯಕತ್ವದಲ್ಲಿ 30 ವರ್ಷ ಕೆಲಸ ಮಾಡಿದ್ದೇನೆ. ತಮ್ಮ ರಾಜಕೀಯ ಬದುಕಿಗೆ ಅವರ ಕೊಡುಗೆ ದೊಡ್ಡದಾಗಿದ್ದು ಯಾವಾಗಲು ಋಣಿಯಾಗಿರುತ್ತೇನೆ ಎಂದಿದ್ದಾರೆ. 

'ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ತೊಂದರೆಗಳು ಎದುರಾದ ಕಾರಣ ಮತ್ತು ಅಸಹಾಯಕತೆಯಿಂದಾಗಿ ನಾನು ಅಜಿತ್‌ ಅವರೊಂದಿಗೆ ಆಡಳಿತ ಪಕ್ಷದ ಜೊತೆಗೆ ಹೋಗಬೇಕಾಯಿತು. ಸರ್ಕಾರ ಸದ್ಯ ನಮ್ಮ ಬ್ಯಾಂಕ್‌ಗೆ ₹ 300 ಕೋಟಿ ಅನುದಾನ ಒದಗಿಸಿದೆ. ಪವಾರ್‌ ಅವರು ನಮ್ಮ ಪಾಲಿಗೆ ಸದಾ ಪೂಜ್ಯನೀಯರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.