ನವದೆಹಲಿ: ‘ನಿಧಿ ಸಂಗ್ರಹದ ಉದ್ದೇಶಕ್ಕಾಗಿ ಮುದ್ರಣ, ದೃಶ್ಯ, ಸಾಮಾಜಿಕ ಮಾಧ್ಯಮ ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಜಾಹೀರಾತುಗಳಲ್ಲಿ ದುರ್ಬಲ ಮಕ್ಕಳನ್ನು ಶೋಚನೀಯ ರೀತಿಯಲ್ಲಿ ತೋರಿಸುವುದನ್ನು ನಿಲ್ಲಿಸಿ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್)ಸ್ವಯಂ ಸೇವಾ ಸಂಸ್ಥೆಗಳಿಗೆ (ಎನ್‌ಜಿಒ) ಮಂಗಳವಾರ ಸೂಚಿಸಿದೆ.
‘ಜಾಹೀರಾತುಗಳಲ್ಲಿ ಮಕ್ಕಳನ್ನು ಶೋಚನೀಯ ಸ್ಥಿತಿಯಲ್ಲಿ ತೋರಿಸುವುದು ಅವರ ಹಕ್ಕಿನ ಉಲ್ಲಂಘನೆಯಾಗಲಿದೆ. ಹೀಗಾಗಿ ಇಂತಹ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ’ ಎಂದು ಎನ್‌ಜಿಒಗಳಿಗೆ ಕಳುಹಿಸಿರುವ ನೋಟಿಸ್‌ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.