ರಾಂಚಿ: ಮೇಲಿಂದ ಮೇಲೆ ಬಾಲಕಿಯರ ವಿರುದ್ಧ ಅಪರಾಧ ಘಟನೆಗಳು ನಡೆದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು (ಎನ್‌ಸಿಪಿಸಿಆರ್) ಸೋಮವಾರ ಜಾರ್ಖಂಡ್‌ಗೆ ಭೇಟಿ ನೀಡಲಿದೆ.
ಈ ಕುರಿತು ಮಾತನಾಡಿರುವ ಎನ್‌ಸಿಪಿಸಿಆರ್‌ನ ಮುಖ್ಯಸ್ಥ ಪ್ರಿಯಾಂಕ್ ಕಾನೂಂಗೊ, ಈ ಅಪರಾಧ ಪ್ರಕರಣಗಳು ಎಚ್ಚರಿಕೆ ಗಂಟೆಯಾಗಿವೆ. ಆದ್ದರಿಂದ ತಮ್ಮ ನೇತೃತ್ವದ ತಮ್ಮ ತಂಡ ತನಿಖೆಯ ಸ್ಥಿತಿಯನ್ನು ಪರಿಶೀಲಿಸಲು ಜಾರ್ಖಂಡ್‌ಗೆ ತೆರಳಲಿದೆ ಎಂದು ಹೇಳಿದ್ದಾರೆ.
‘ಸೋಮವಾರದ ಭೇಟಿಯ ವೇಳೆ, ದುಮ್ಕಾದಲ್ಲಿ ನಡೆದ ಇಬ್ಬರು ಬಾಲಕಿಯರ ಸಾವಿನ ಪ್ರಕರಣಗಳ ವಿವರಗಳ ಪರಿಶೀಲನೆಗೆ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲಾಗುವುದು’ ಎಂದು ಕಾನೂಂಗೊ ಹೇಳಿದ್ದಾರೆ.
ಮದುವೆಯ ನೆಪದಲ್ಲಿ ವ್ಯಕ್ತಿಯೊಬ್ಬನಿಂದ ಲೈಂಗಿಕ ಶೋಷಣೆಗೊಳಗಾದ 14 ವರ್ಷದ ಬುಡಕಟ್ಟು ಬಾಲಕಿಯೊಬ್ಬಳು ಶುಕ್ರವಾರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಾಲಕಿಯ ತಾಯಿ, ತನ್ನ ಮಗಳನ್ನು ಅತ್ಯಾಚಾರ ಮಾಡಿ, ಕೊಲ್ಲಲಾಗಿದೆ ಎಂದು ಆರೋಪಿಸಿದ್ದರು. ಸದ್ಯ ಪ್ರಕರಣದ ಆರೋಪಿ ನಾಪತ್ತೆಯಾಗಿದ್ದಾನೆ.
ಇದಕ್ಕೂ ಕೆಲವು ದಿನಗಳ ಮುಂಚೆ, ಆಗಸ್ಟ್ 23ರಂದು 16 ವರ್ಷದ ಬಾಲಕಿಯೊಬ್ಬಳನ್ನು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಕನಿಷ್ಠ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.