ನವದೆಹಲಿ: 2022ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 31 ಸಾವಿರ ದೂರುಗಳನ್ನು ಸ್ವೀಕರಿಸಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಳ್ಯು) ಹೇಳಿದೆ. ಇದು 2014ರಿಂದ ದಾಖಲಾಗಿರುವ ಅತ್ಯಧಿಕ ದೂರುಗಳು.
2021ರಲ್ಲಿ ಎನ್‌ಸಿಡಬ್ಳ್ಯು 30,864 ದೂರುಗಳನ್ನು ಸ್ವೀಕರಿಸಿತ್ತು. 2022ರಲ್ಲಿ ಕೊಂಚ ಹೆಚ್ಚಾಗಿದ್ದು ಒಟ್ಟು 30,957 ದೂರುಗಳು ದಾಖಲಾಗಿವೆ.
ಈ ಪೈಕಿ 9,710 ದೂರುಗಳು ಮಾನಸಿಕ ಕಿರುಕುಳಕ್ಕೆ ಸಂಬಂಧಿಸಿವೆ. 6,970 ದೂರುಗಳು ಕೌಟುಂಬಿಕ ಕಿರುಕುಳಕ್ಕೆ ಸಂಬಂಧಿಸಿವೆ. ಇನ್ನು 4,600 ದೂರುಗಳು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿವೆ ಎಂದು ಎನ್‌ಸಿಡಬ್ಳ್ಯು ತಿಳಿಸಿದೆ.
ಉತ್ತರ ಪ್ರದೇಶ ಒಂದರಲ್ಲೇ ಶೇ 54.3ರಷ್ಟು (16,872) ದೂರುಗಳು ದಾಖಲಾಗಿದ್ದು, ದೇಶದಲ್ಲೇ ಅಧಿಕವಾಗಿದೆ. ನಂತರದ ಸ್ಥಾನದಲ್ಲಿ ದೆಹಲಿ (3,004), ಮಹಾರಾಷ್ಟ್ರ (1,381), ಬಿಹಾರ (1,368) ಹಾಗೂ ಹರಿಯಾಣ (1,362) ರಾಜ್ಯಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.