ADVERTISEMENT

ಥಾಣೆ | ಭಾರಿ ಮಳೆ, ರೆಸಾರ್ಟ್ ಜಲಾವೃತ: ಎನ್‌ಡಿಆರ್‌ಎಫ್‌ನಿಂದ 49 ಮಂದಿಯ ರಕ್ಷಣೆ

ಪಿಟಿಐ
Published 7 ಜುಲೈ 2024, 8:56 IST
Last Updated 7 ಜುಲೈ 2024, 8:56 IST
<div class="paragraphs"><p>ಎನ್‌ಡಿಆರ್‌ಎಫ್</p></div>

ಎನ್‌ಡಿಆರ್‌ಎಫ್

   

ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡ ರೆಸಾರ್ಟ್‌ನಿಂದ 49 ಮಂದಿಯನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಾರಿ ಮಳೆಯಿಂದಾಗಿ ಶಹಪುರ್ ಪ್ರದೇಶದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ರೆಸಾರ್ಟ್‌ನಲ್ಲಿ ಸಿಲುಕಿದ್ದ ಜನರನ್ನು ದೋಣಿ ಹಾಗೂ ಲೈಫ್ ಜಾಕೆಟ್‌ಗಳ ಸಹಾಯದಿಂದ ಎನ್‌ಡಿಆರ್‌ಎಫ್‌ನ ತಂಡವು ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಾರು ಮಳೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

ಮುಂಬೈ, ಥಾಣೆ, ಪಾಲ್ಘರ್, ಸತಾರಾ, ಸಾಂಗ್ಲಿ, ಕೊಲ್ಹಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ತಲಾ 32ರಿಂದ 35 ಸಿಬ್ಬಂದಿಯ 13 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.