ನವದೆಹಲಿ : ನೈಸರ್ಗಿಕ ವಿಕೋಪಗಳಾದ ಭೂಕಂಪ ಹಾಗೂ ಪ್ರವಾಹ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ದೇಶದ ಸುಮಾರು 66 ಲಕ್ಷ ಜನರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತರಬೇತಿ ನೀಡಿದೆ.
ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಕೋಪಗಳಿಂದ ಚೇತರಿಸಿಕೊಳ್ಳುವಂತೆ ಮಾಡುವುದು ಹಾಗೂ ಸ್ಥಳೀಯ ಜನರನ್ನು ಯಾವುದೇ ಪರಿಸ್ಥಿತಿಗೆ ಸನ್ನದ್ಧರನ್ನಾಗಿ ಮಾಡುವುದು ತರಬೇತಿ ಕಾರ್ಯಕ್ರಮಗಳ ಉದ್ದೇಶ ಎಂದುಎನ್‌ಡಿಆರ್‌ಎಫ್ ನಿರ್ದೇಶಕ ಸಂಜಯ್ ಕುಮಾರ್ ತಿಳಿಸಿದ್ದಾರೆ.
ತರಬೇತಿಯ ವೇಳೆ ಏನು ಮಾಡಬೇಕು ಏನನ್ನು ಮಾಡಬಾರದು ಎಂದು ಮಾಹಿತಿ ನೀಡಲಾಗುತ್ತದೆ. ಕಳೆದ ವರ್ಷದಿಂದ ತರಬೇತಿ ಅವಧಿಗಳನ್ನು ಹೆಚ್ಚಿಸಲಾಗಿದ್ದು, ಮುಂದಿನ ದಿನಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರವಾಹ ಪೀಡಿತ ರಾಜ್ಯಗಳಲ್ಲಿ ಈಗಾಗಲೇ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ.
==
ಎನ್‌ಡಿಆರ್‌ಎಫ್ ಜಾಗೃತಿ ಕಾರ್ಯಕ್ರಮಗಳು
* ಸಮುದಾಯ ಜಾಗೃತಿ ಕಾರ್ಯಕ್ರಮ
* ಶಾಲಾ ಸುರಕ್ಷತಾ ಕಾರ್ಯಕ್ರಮ
* ಅಣಕು ಕಾರ್ಯಾಚರಣೆ
–––––
2006
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆರಂಭ
–––––
2,095
ಈವರೆಗೆ ನಡೆಸಿದ ಕಾರ್ಯಾಚರಣೆಗಳು
–––––
10,193
ಜಾಗೃತಿ ತರಬೇತಿ ಕಾರ್ಯಕ್ರಮಗಳು
––––––
12
ಬೆಟಾಲಿಯನ್‌ಗಳು
––––––
13,000
ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.