ನವದೆಹಲಿ: ‘ಸುಪ್ರೀಂ ಕೋರ್ಟ್ ನೀಡಿದ ಸುಮಾರು 37 ಸಾವಿರ ತೀರ್ಪುಗಳ ಹಿಂದಿ ಅನುವಾದವು ಪೂರ್ಣಗೊಂಡಿದ್ದು, ಕೃತಕ ಬುದ್ಧಿಮತ್ತೆ ಬಳಸಿ ಪ್ರಾದೇಶಿಕ ಭಾಷೆಗಳಿಗೆ ತೀರ್ಪುಗಳನ್ನು ಅನುವಾದ ಮಾಡುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಗುರುವಾರ ತಿಳಿಸಿದರು.
‘ಹಿಂದಿಗೆ ಅನುದಾನ ಮಾಡಿದ ಬಳಿಕ ಈಗ ತಮಿಳು ಭಾಷೆಗೆ ಅನುದಾನ ಮಾಡುವ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಸಾಗುತ್ತಿದೆ’ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್ ಅವರು ಈ ಮಾಹಿತಿ ನೀಡಿದರು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರೂ ಪೀಠದಲ್ಲಿದ್ದರು.
‘ಅನುವಾದದಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯು ಸೂಕ್ತವಾಗುತ್ತಿಲ್ಲ. ಕಾನೂನು ಭಾಷೆಯನ್ನು ಇನ್ಯಾವುದೋ ಪರಿಭಾಷೆಯಲ್ಲಿ ಅನುವಾದ ಮಾಡಿಬಿಡುತ್ತದೆ. ಆದ್ದರಿಂದ, ಕೊನೆಯಲ್ಲಿ ಈ ಅನುವಾದಗಳನ್ನು ವ್ಯಕ್ತಿಯೊಬ್ಬರು ಸರಿಪಡಿಸಲೇಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.