ADVERTISEMENT

ಭವಿಷ್ಯದ ಯುದ್ಧಕ್ಕೆ ಸಮಗ್ರ ಸುಧಾರಣೆ ಅಗತ್ಯ: ಏರ್‌ ಚೀಫ್‌ ಮಾರ್ಷಲ್‌ ಚೌಧರಿ

ಪಿಟಿಐ
Published 14 ಡಿಸೆಂಬರ್ 2023, 15:50 IST
Last Updated 14 ಡಿಸೆಂಬರ್ 2023, 15:50 IST
ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ 
ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ    

ಪುಣೆ: ಭವಿಷ್ಯದಲ್ಲಿ ನಡೆಯುವ ಯುದ್ಧಗಳು ಹೆಚ್ಚು ಸಂಕೀರ್ಣ, ಗೊಂದಲಕಾರಿ ಸ್ಪರ್ಧಾತ್ಮಕವಾಗಿರಲಿವೆ. ಅದಕ್ಕೆ ತಕ್ಕಂತೆ ನಮ್ಮ ಯುದ್ಧತಂತ್ರಗಳು ಹಾಗೂ ಶಸ್ತ್ರಾಸ್ತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಗುರುವಾರ ಹೇಳಿದ್ದಾರೆ.

ಇಲ್ಲಿನ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ಜನರಲ್‌ ಬಿ.ಸಿ.ಜೋಷಿ ಸಂಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಾಯುಪಡೆ ನೀತಿ’ಯ ಇತ್ತೀಚಿನ ಆವೃತ್ತಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳನ್ನು ಪ್ರಸ್ತಾಪಿಸಿದ ಅವರು, ‘ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ವೈಮಾಂತರಿಕ್ಷ ಶಕ್ತಿ ವೃದ್ಧಿಗೆ ಅಗತ್ಯವಿರುವಂತೆ ವಾಯುಪಡೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ’ ಎಂದರು.

ADVERTISEMENT

ವಾಯುಪಡೆಯ ಸಾಮರ್ಥ್ಯ ವೃದ್ಧಿಗಾಗಿ ಸುಸಜ್ಜಿತ ಸಾಧನಗಳು, ಮಾನವರಹಿತ ವೇದಿಕೆಗಳು, ದೂರಸಂವೇದಿಗಳು, ಸಂವಹನ ಹಾಗೂ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನು ಹೊಂದುವುದರ ಮಹತ್ವವನ್ನು ಸಹ ವಿವರಿಸಿದರು.‘

ಆಧುನಿಕ ತಂತ್ರಜ್ಞಾನ ಹಾಗೂ ಈ ತಂತ್ರಜ್ಞಾನಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿಯ ಅಗತ್ಯವಿದೆ ಎಂದ ಅವರು, ವಾಯುಪಡೆಯ ಸಾಮರ್ಥ್ಯ ವೃದ್ಧಿಗೆ ಕೃತಕಬುದ್ಧಿಮತ್ತೆ ಹಾಗೂ ಡೇಟಾ ಅನಲಿಟಿಕ್ಸ್‌ ಅಳವಡಿಕೆಯೂ ಅಗತ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.