ADVERTISEMENT

ಸ್ತನ ಕ್ಯಾನ್ಸರ್‌ ಚಿಕಿತ್ಸೆಗೆ ಬೇವು ಸಹಾಯಕ

ಎನ್‌ಐಪಿಇಆರ್ ವಿಜ್ಞಾನಿಗಳಿಂದ ಸಂಶೋಧನೆ

ಪಿಟಿಐ
Published 1 ಜುಲೈ 2018, 19:41 IST
Last Updated 1 ಜುಲೈ 2018, 19:41 IST
neem
neem   

ಹೈದರಾಬಾದ್ : ಸ್ತನ ಕ್ಯಾನ್ಸರ್ ವಾಸಿ ಮಾಡಲು ನಿಂಬೊಲಿಡೆ ಎನ್ನುವ ಬೇವಿನ ಸೊಪ್ಪಿನ ರಾಸಾಯನಿಕ ಸಂಯುಕ್ತಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲದು ಎಂದು ನಗರ ಮೂಲದ ರಾಷ್ಟ್ರೀಯ ಔಷಧೀಯ ಶಿಕ್ಷಣ ಸಂಸ್ಥೆ (ಎನ್‌ಐಪಿಇಆರ್) ವಿಜ್ಞಾನಿಗಳು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ, ವೈದ್ಯಕೀಯ ಪ್ರಯೋಗ ನಡೆಸಲು ನೆರವು ನೀಡುವಂತೆಜೀವವಿಜ್ಞಾನ, ‌ಆಯುಷ್, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಸಂಸ್ಥೆಗಳಿಗೆ ಮನವಿ ಮಾಡಲಾಗುವುದು.ಸ್ತನ ಕ್ಯಾನ್ಸರ್ ಉಲ್ಬಣಿಸುವುದನ್ನು ನಿಂಬೊಲಿಡೆ ತಡೆಯುತ್ತದೆ ಎಂದು ವಿಜ್ಞಾನಿ ಚಂದ್ರಯ್ಯ ಗೊಡುಗು ಹೇಳಿದ್ದಾರೆ.

ಅಗ್ಗದ ಔಷಧ: ಭಾರತದಲ್ಲಿ ಬೇವಿನ ಮರಗಳು ಹೇರಳವಾಗಿ ದೊರಕುತ್ತವೆ. ಈ ಸಂಶೋಧನೆಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡರೆನಿಂಬೊಲಿಡೆ ಅಗ್ಗದ ಕ್ಯಾನ್ಸರ್ ನಿಗ್ರಹ ಔಷಧ ಆಗುತ್ತದೆ.ಜತೆಗೆ ಕಿಮೊಥೆರಪಿಯಿಂದ ಆಗುವ ಹಲವು ಅಡ್ಡ‍ಪರಿಣಾಮಗಳನ್ನುತಡೆಗಟ್ಟಲು ಸಹ ಇದು ಪ್ರಭಾವಶಾಲಿಯಾಗಿ ಕಾರ್ಯ ನಿರ್ವಹಿಸಬಹುದು ಎಂದುಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.