ಚೆನ್ನೈ: ನೀಟ್‌ನಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ನೊಂದಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ಪರೀಕ್ಷೆ ಫಲಿತಾಂಶ ಪ್ರಕಟವಾದ ಕೆಲ ಗಂಟೆಗಳಲ್ಲೇ ತಮಿಳುನಾಡಿನ ತಿರುಪ್ಪುರ್‌ನ ರೀತು ಶ್ರೀ, ಪಟ್ಟುಕ್ಕೊಟೈನ ವೈಶಿಯಾ ಹಾಗೂವಿಲ್ಲುಪುರಂನ ಎಂ.ಮೋನಿಷಾಆತ್ಮಹತ್ಯೆಗೆ ಶರಣಾಗಿದ್ದಾರೆ. ರೀತು ಶ್ರೀ ಹಾಗೂ ವೈಶಿಯಾಗೆದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರೂ, ನೀಟ್‌ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ.
ಮೊಗವೀರ ಸಮುದಾಯದಮೋನಿಷಾಈ ವರ್ಷ 2ನೇ ಬಾರಿ ನೀಟ್ ಬರೆದರೂ ತೇರ್ಗಡೆಯಾಗಲು ವಿಫಲವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.