ADVERTISEMENT

ನೀಟ್‌–ಯುಜಿ ಫಲಿತಾಂಶ: ಹರಿಯಾಣದಲ್ಲಿ ಯಾರಿಗೂ ಪೂರ್ಣಾಂಕವಿಲ್ಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 16:25 IST
Last Updated 20 ಜುಲೈ 2024, 16:25 IST
ನೀಟ್‌
ನೀಟ್‌   

ನವದೆಹಲಿ: ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ವರ್ಷದ ‘ನೀಟ್‌– ಯುಜಿ’ಯ ಕೇಂದ್ರ ಮತ್ತು ನಗರವಾರು ಫಲಿತಾಂಶಗಳನ್ನು ಶನಿವಾರ ಪ್ರಕಟ ಮಾಡಿದ್ದು, ಅಭ್ಯರ್ಥಿಗಳ ಗುರುತನ್ನು ಮರೆಮಾಚಿದೆ.

ಜೂನ್‌ 4ರಂದು ಪ್ರಕಟವಾಗಿದ್ದ ಫಲಿತಾಂಶದಲ್ಲಿ 720ಕ್ಕೆ 720 ಅಂಕ ಗಳಿಸಿದ್ದ ಹರಿಯಾಣ ಬಹದ್ದೂರ್‌ಗಢ ಪರೀಕ್ಷಾ ಕೇಂದ್ರದ ಆರು ವಿದ್ಯಾರ್ಥಿಗಳಲ್ಲಿ ಯಾರೊಬ್ಬರೂ ಪೂರ್ಣ ಅಂಕಗಳನ್ನು ಪಡೆದಿಲ್ಲ. ಈ ಕೇಂದ್ರದಲ್ಲಿ 682 ಅಂಕಗಳನ್ನು ಪಡೆದ ಅಭ್ಯರ್ಥಿಯೇ ‘ಟಾಪರ್‌’ ಆಗಿದ್ದಾರೆ.  

ಪರೀಕ್ಷಾ ಅಕ್ರಮಗಳ ಆರೋಪಗಳು ವ್ಯಕ್ತವಾಗಿರುವ ಕಾರಣ ‘ನೀಟ್‌–ಯುಜಿ’ ಪರೀಕ್ಷೆಯನ್ನು ರದ್ದುಪಡಿಸಬೇಕು, ಮರು ಪರೀಕ್ಷೆ ನಡೆಸಬೇಕು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇದೇ 22ರಂದು ಪುನರಾರಂಭಿಸಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.