ADVERTISEMENT

NEET-UG ಅಕ್ರಮ: ಶಂಕಿತ ಪ್ರಮುಖ ಸಂಚುಕೋರನನ್ನು ಜಾರ್ಖಂಡ್‌ನಲ್ಲಿ ಬಂಧಿಸಿದ CBI

ಪಿಟಿಐ
Published 4 ಜುಲೈ 2024, 4:14 IST
Last Updated 4 ಜುಲೈ 2024, 4:14 IST
ನೀಟ್
ನೀಟ್   

ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆ ನೀಟ್–ಯುಜಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು(ಸಿಬಿಐ) ಪ್ರಕರಣದ ಶಂಕಿತ ಪ್ರಮುಖ ಸಂಚುಕೋರನನ್ನು ಜಾರ್ಖಂಡ್‌ನ ಧಾನ್‌ಬಾದ್‌ನಲ್ಲಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಶಂಕಿತ ಸಂಚುಕೋರನನ್ನು ಅಮನ್ ಸಿಂಗ್ ಎಂದು ಗುರುತಿಸಲಾಗಿದೆ.

ಜಾರ್ಖಂಡ್‌ನ ಹಜಾರಿಬಾಗ್‌ನ ಒಯಸಿಸ್ ಶಾಲೆಯಲ್ಲಿ ಪ್ರಾಂಶುಪಾಲ ಮತ್ತು ಉಪಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದ ಡಾ. ಎಹ್ಸಾನ್ ಉಲ್ ಹಕ್, ಇಂತಿಯಾಜ್ ಅಲಂ ಎಂಬವವರನ್ನು ಶುಕ್ರವಾರ ಸಿಬಿಐ ಬಂಧಿಸಿತ್ತು. ನೀಟ್ ಪರೀಕ್ಷೆಗೆ ನಗರ ಸಂಯೋಜಕರಾಗಿ ಹಕ್ ಅವರನ್ನು ನೇಮಕ ಮಾಡಲಾಗಿತ್ತು. ತನಿಖೆಯ ಮುಂದುವರಿದ ಭಾಗವಾಗಿ ಪ್ರಮುಖ ಸಂಚುಕೋರನ ಬಂಧನವಾಗಿದೆ.

ADVERTISEMENT

ಇದಕ್ಕೂ ಮುನ್ನ, ಬಿಹಾರದ ಪಟ್ನಾದಲ್ಲಿ ಮನೀಶ್ ಪ್ರಕಾಶ್ ಮತ್ತು ಅಶುತೋಷ್ ಎಂಬ ಇಬ್ಬರನ್ನು ಬಂಧಿಸಲಾಗಿತ್ತು. ಇವರು ಪಟ್ನಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಹಂಚಿದ್ದರು ಎಂದು ತಿಳಿದುಬಂದಿದೆ.

ಅಶುತೋಷ್ ವಿದ್ಯಾರ್ಥಿಗಳಿಗಾಗಿ ಗೋಪ್ಯ ನಿವಾಸದ ವ್ಯವಸ್ಥೆ ಮಾಡಿದ್ದರು. ಮನೀಶ್ ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದೊಯ್ದು ಪ್ರಶ್ನೆಪತ್ರಿಕೆ ನೀಡುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.

ಪ್ರಶ್ನೆಪತ್ರಿಕೆ ಸೋರಿಕೆ, ಒಂದೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿಕೆಯಂತಹ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.