ADVERTISEMENT

ಮೃತದೇಹದ ಅವಶೇಷಗಳನ್ನು ತನ್ನಿ: ಪ್ರಧಾನಿಗೆ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಮನವಿ

ಪಿಟಿಐ
Published 28 ಜುಲೈ 2024, 10:17 IST
Last Updated 28 ಜುಲೈ 2024, 10:17 IST
ಚಂದ್ರ ಕುಮಾರ್ ಬೋಸ್
ಚಂದ್ರ ಕುಮಾರ್ ಬೋಸ್   

ಕೋಲ್ಕತ್ತ: ‘ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಮೃತದೇಹದ ಅವಶೇಷಗಳನ್ನು ಜಪಾನ್‌ನಿಂದ ಭಾರತಕ್ಕೆ ಆಗಸ್ಟ್‌ 18ರ ಒಳಗಾಗಿ ತರಬೇಕು’ ಎಂದು ಒತ್ತಾಯಿಸಿ ನೇತಾಜಿ ಅವರ ಮರಿಮೊಮ್ಮಗ ಚಂದ್ರ ಕುಮಾರ್‌ ಬೋಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

1945ರ ಆಗಸ್ಟ್‌ 18ರಂದು ನೇತಾಜಿ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.

‘ಬೋಸ್‌ ಅವರ ಸಾವಿಗೆ ಸಂಬಂಧಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 10 ತನಿಖೆಗಳು ನಡೆದಿವೆ. ಈ ತನಿಖಾ ವರದಿಗಳನ್ನು ಗೌಪ್ಯ ದಾಖಲೆಗಳು ಎಂದು ವರ್ಗೀಕರಿಸಿ ಇಡಲಾಗಿದೆ. ಈ ಎಲ್ಲ ವರದಿಗಳಲ್ಲಿಯೂ ನೇತಾಜಿ ಅವರು ವಿಮಾನ ದುರಂತದಲ್ಲಿ ಮೃತಪಟ್ಟರು ಎಂದೇ ಹೇಳಲಾಗಿದೆ’ ಎಂದು ನೆನಪಿಸಿಕೊಂಡಿದ್ದಾರೆ.

ADVERTISEMENT

‘ಈ ಹತ್ತೂ ತನಿಖೆಗಳ ಈ ವರದಿ‌ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಆ ಮೂಲಕ ನೇತಾಜಿ ಅವರ ಸಾವಿನ ಕುರಿತು ರೂಪುಗೊಂಡಿರುವ ಹುಸಿ ಸಂಕಥನಗಳು ಅ‌ಂತ್ಯವಾಗಬೇಕಿದೆ. ಆದ್ದರಿಂದ ಈ ಬಗ್ಗೆ ಕೇಂದ್ರ ಸರ್ಕಾರವು ಅಂತಿಮ ಹೇಳಿಕೆಯನ್ನು ನೀಡಬೇಕು’ ಎಂದು ಪತ್ರದಲ್ಲಿ ಚಂದ್ರ ಕುಮಾರ್‌ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.