ADVERTISEMENT

ಭಾರತದಲ್ಲಿ ಓಮೈಕ್ರಾನ್‌ನ ಹೊಸ ತಳಿ ಪತ್ತೆ: ವಿಶ್ವಸಂಸ್ಥೆ

ಪಿಟಿಐ
Published 7 ಜುಲೈ 2022, 6:50 IST
Last Updated 7 ಜುಲೈ 2022, 6:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್‌: ‘ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ನ ಹೊಸ ಉಪತಳಿ ಬಿಎ.2.75 ಭಾರತದಲ್ಲಿ ಪತ್ತೆಯಾಗಿದೆ. ಇದರ ಮೇಲೆ ನಿಗಾ ವಹಿಸಲಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

‘ಕಳೆದ ಎರಡು ವಾರಗಳಲ್ಲಿ ಜಾಗತಿಕವಾಗಿ ಶೇ. 30ರಷ್ಟು ಕೋವಿಡ್‌ ಪ್ರಕರಣಗಳು ಹೆಚ್ಚಾಗಿವೆ. ಡಬ್ಲ್ಯುಎಚ್‌ಒ 6 ಉಪ-ವಲಯಗಳ ಪೈಕಿ ನಾಲ್ಕರಲ್ಲಿ ಕಳೆದ ವಾರ ಪ್ರಕರಣಗಳು ಹೆಚ್ಚಾಗಿವೆ’ ಎಂದು ಗೆಬ್ರೆಯೆಸಸ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಯುರೋಪ್ ಮತ್ತು ಅಮೆರಿಕಾದಲ್ಲಿ, ಬಿಎ.4 ಮತ್ತು ಬಿಎ.5ನಿಂದಾಗಿ ಹೊಸ ಅಲೆ ಕಾಣಿಸಿಕೊಂಡಿದೆ. ಭಾರತದಂತಹ ದೇಶಗಳಲ್ಲಿ ಬಿಎ.2.75 ರ ಹೊಸ ತಳಿಯನ್ನು ಪತ್ತೆಹಚ್ಚಲಾಗಿದೆ. ಅದರ ಮೇಲೆ ನಾವು ನಿಗಾವಹಿಸಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

ಬಿಎ.2.75 ಕುರಿತು ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ‘ಬಿಎ.2.75 ಎಂದು ಕರೆಯಲಾಗುವ ತಳಿಯೊಂದು ಹೊರಹೊಮ್ಮಿದೆ. ಅದು ಭಾರತದಲ್ಲಿ ಮೊದಲು ಪತ್ತೆಯಾಗಿದ್ದು, ನಂತರ 10 ದೇಶಗಳಲ್ಲಿ ಕಾಣಿಸಿಕೊಂಡಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.