ನವದೆಹಲಿ: ಕೆಲ ಪದಗಳನ್ನು ಅಸಂಸದೀಯ ಎಂದು ಪಟ್ಟಿ ಮಾಡಿರುವ ಕೇಂದ್ರ ಸರ್ಕಾರವು, ಅವುಗಳನ್ನು ಸಂಸತ್‌ನಲ್ಲಿ ಬಳಸುವುದಕ್ಕೆ ನಿಷೇಧ ವಿಧಿಸಿದೆ. ಸರ್ಕಾರದ ಆದೇಶವನ್ನು ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅಸಂಸದೀಯ ಶಬ್ದಕ್ಕೆ ರಾಹುಲ್ ಗಾಂಧಿ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ. ‘ಅಸಂಸದೀಯ:ಮೋದಿ ಸರ್ಕಾರದ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ವಿವರಿಸುವ ಚರ್ಚೆಗಳು ಮತ್ತು ಚರ್ಚೆಗಳಲ್ಲಿ ಬಳಸುವ ಶಬ್ದಗಳು. ಈಗ ಅವುಗಳನ್ನು ನಿಷೇಧಿಸಲಾಗಿದೆ’ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.
‘ಅಸಂಸದೀಯ ಶಬ್ದಗಳಿರುವವಾಕ್ಯಕ್ಕೆ ಇದು ಉದಾಹರಣೆಯಾಗಬಹುದು. ‘ಜುಮ್ಲಾಜೀವಿ ತಾನಶಾ (ಸರ್ವಾಧಿಕಾರಿ) ತನ್ನ ಸುಳ್ಳುಗಳು ಬಹಿರಂಗಗೊಂಡಿದ್ದಕ್ಕಾಗಿ ಮೊಸಳೆ ಕಣ್ಣೀರು ಸುರಿಸಿದ’ ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.