ADVERTISEMENT

ಜಲಿಯನ್‌ವಾಲಾ ಬಾಗ್: ವಿಶ್ವನಾಥ ದತ್ತಾ ಕೃತಿಯ ಹೊಸ ಆವೃತ್ತಿ ಬಿಡುಗಡೆ

ಪಿಟಿಐ
Published 15 ಮಾರ್ಚ್ 2021, 11:54 IST
Last Updated 15 ಮಾರ್ಚ್ 2021, 11:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇತಿಹಾಸಕಾರ ದಿವಂಗತ ವಿಶ್ವನಾಥ ದತ್ತ ಅವರ 1969ರ ಅತ್ಯುತ್ತಮ ಕೃತಿ ‘ಜಲಿಯನ್‌ವಾಲಾ ಬಾಗ್: ಎ ಗ್ರೌಂಡ್‌ಬ್ರೇಕಿಂಗ್ ಹಿಸ್ಟರಿ ಆಫ್‌ ದ 1919 ಮೆಸಾಕರ್’ಯ ನೂತನ ಆವೃತ್ತಿ ಸೋಮವಾರ ಬಿಡುಗಡೆಯಾಗಿದೆ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ತಿಳಿಸಿದೆ.

ಪರಿಷ್ಕೃತ ಆವೃತ್ತಿಯಲ್ಲಿ ಕೃತಿಕಾರನ ಪುತ್ರಿ, ಇತಿಹಾಸಕಾರರೂ ಆದ ನೊನಿಕಾ ದತ್ತ ಅವರ ಪರಿಚಯ ಲೇಖನವಿದೆ. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಕುರಿತ ಪ್ರಥಮ ದಾಖಲೆ ಇದಾಗಿದೆ ಎಂದು ಹೇಳಲಾಗಿದೆ.

ಪ್ರಾಥಮಿಕ ಮಾಹಿತಿ ಮತ್ತು ಹತ್ಯಾಕಾಂಡದಲ್ಲಿ ನೊಂದವರು, ಬದುಕುಳಿದವರ ಅನುಭವಗಳನ್ನು ಆಧರಿಸಿ ಈ ಕೃತಿ ರಚಿಸಲಾಗಿದ್ದು, ಐತಿಹಾಸಿಕ ಘಟನೆ ಕುರಿತು ಪ್ರಥಮ ದಾಖಲೆ ಇದಾಗಿದೆ. ಈ ಘಟನೆಯೇ ಮುಂದೆ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳಲು ಕಾರಣವಾಯಿತು.

ADVERTISEMENT

ಇದು, ನನ್ನ ತಂದೆ 1969ರಲ್ಲಿ ಬರೆದ ಕೃತಿಯ ಹೊಸ ಆವೃತ್ತಿ. ಈ ಕೃತಿಯಲ್ಲಿ ಅಮೃತಸರ ನಗರದ ಸಂಕೀರ್ಣ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ಎಂದು ನೊನಿಕಾ ತಿಳಿಸಿದರು. ಇವರು, ಸದ್ಯ ಜವಹರಲಾಲ್ ನೆಹರೂ ಯೂನಿವರ್ಸಿಟಿಯಲ್ಲಿ ಇತಿಹಾಸ ವಿಷಯ ಬೋಧನೆ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.