ADVERTISEMENT

ಹೊಸ ಸಂಸತ್‌ ಭವನ ವಿಶ್ವದಲ್ಲೇ ಶ್ರೇಷ್ಠ ವಿನ್ಯಾಸ ಎಂದು ಭಾಸವಾಯಿತು: ನಟ ಜಗ್ಗೇಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2023, 11:28 IST
Last Updated 19 ಸೆಪ್ಟೆಂಬರ್ 2023, 11:28 IST
<div class="paragraphs"><p>ರಾಜ್ಯಸಭೆಯಲ್ಲಿ&nbsp;ಜಗ್ಗೇಶ್‌</p></div>

ರಾಜ್ಯಸಭೆಯಲ್ಲಿ ಜಗ್ಗೇಶ್‌

   

ಬೆಂಗಳೂರು: ಹೊಸ ಸಂಸತ್‌ ಭವನವು ವಿಶ್ವದಲ್ಲೇ ಶ್ರೇಷ್ಠ ವಿನ್ಯಾಸ ಎಂದು ಭಾಸವಾಯಿತು ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಬಣ್ಣಿಸಿದ್ದಾರೆ.

ಹೊಸ ಸಂಸತ್‌ ಭವನದ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಹೊಸ ರಾಜ್ಯಸಭೆ ಸದನದಲ್ಲಿ ನಾನು ಕೂರುವ ಜಾಗ. ಸಂಸತ್ ಭವನ ವಿಶ್ವದಲ್ಲೇ ಶ್ರೇಷ್ಠ ವಿನ್ಯಾಸ ಎಂದು ಭಾಸವಾಯಿತು..ಇಂಥ ಕೊಡುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸುವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಒಯ್ಯವ ನಿಮ್ಮ (ಮೋದಿ) ಶ್ರಮ ಹಾಗು ಚಿಂತನೆಗೆ ಭಾರತೀಯರ ಬೆಂಬಲ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ.. ಜಯ ಭಾರತ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಸದನದ ಕಲಾಪ ಹಳೆಯ ಸಂಸತ್ ಭವನದಿಂದ ಹೊಸ ಸಂಸತ್ ಕಟ್ಟಡಕ್ಕೆ ಇಂದು ಸ್ಥಳಾಂತರಗೊಂಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಇಂದು (ಮಂಗಳವಾರ) ಲೋಕಸಭೆಯಲ್ಲಿ ಮಂಡಿಸಿದೆ.

ಪ್ರಸ್ತಾವಿತ ಹೊಸ ಮಸೂದೆಯನ್ನು ‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂದು ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.