ನವದೆಹಲಿ: ಭಾರತೀಯ ವಾಯುಪ್ರದೇಶದಲ್ಲಿ 3,000 ಮೀಟರ್ ಎತ್ತರವನ್ನು ತಲುಪಿದ ಬಳಿಕವೂ ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಅನುಮತಿ ದೊರೆತರೆ ಪ್ರಯಾಣಿಕರು ವೈಫೈ ಮೂಲಕ ಇಂಟರ್‌ನೆಟ್ ಸೇವೆಗಳನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
ಉಪ ನಿಯಮ–1ರಲ್ಲಿ ಉಲ್ಲೇಖಿಸಲಾದ ಭಾರತೀಯ ವಾಯುಪ್ರದೇಶದ ಕನಿಷ್ಠ ಎತ್ತರದ ಹೊರತಾಗಿಯೂ ವಿಮಾನದಲ್ಲಿ ವೈ–ಫೈ ಮೂಲಕ ಇಂಟರ್‌ನೆಟ್ ಸೇವೆಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಕುರಿತು ಹೊಸದಾಗಿ ಅಧಿಸೂಚಿಸಲಾದ ನಿಯಮವನ್ನು ವಿಮಾನ ಮತ್ತು ನೌಕಾ ಸಂಪರ್ಕ (ತಿದ್ದುಪಡಿ) ನಿಯಮಗಳು–2024 ಎಂದು ಕರೆಯಲಾಗುತ್ತದೆ.
ವಿಮಾನ ಮತ್ತು ನೌಕಾ ಸಂಪರ್ಕ (ತಿದ್ದುಪಡಿ) ನಿಯಮಗಳು–2018ರ ಪ್ರಕಾರ, ಭಾರತೀಯ ವಾಯುಪ್ರದೇಶದಲ್ಲಿ ಕನಿಷ್ಠ 3,000 ಮೀಟರ್ ಎತ್ತರದಲ್ಲಿ ವಿಮಾನ ಮತ್ತು ನೌಕಾ ಸಂಪರ್ಕ ಸೇವಾ ಪೂರೈಕೆದಾರರು ಮೊಬೈಲ್ ಸಂವಹನ ಸೇವೆಗಳನ್ನು ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಈಗ ಅದಕ್ಕಿಂತ ಎತ್ತರದಲ್ಲಿ ವಿಮಾನ ಹಾರಾಟ ನಡೆಸುವಾಗಲೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಇಂಟರ್‌ನೆಟ್ ಸೌಲಭ್ಯ ಒದಗಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.