ನವದೆಹಲಿ: ಕೃತಕ ಬುದ್ಧಿಮತ್ತೆ ಹಾಗೂ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ (ITS) ಅಳವಡಿಕೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಸುಗಮ ಸಂಚಾರ ಸಾಧ್ಯವಾಗುವುದಲ್ಲದೆ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯ ಎಂದು ರಸ್ತೆ ಸುರಕ್ಷತಾ ತಜ್ಞರು ಗುರುವಾರ ಹೇಳಿದ್ದಾರೆ.
ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ (IRF) ಭಾರತ ಚಾಪ್ಟರ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಚಾಲಕರ ಸುರಕ್ಷತೆಗೆ ಇರುವ ಕೃತಕ ಬುದ್ಧಿಮತ್ತೆ ಸ್ಟಾರ್ಟಪ್ ಕಂಪನಿ ‘ನೇತ್ರಡೈನ್’ನ ಹಿರಿಯ ನಿರ್ದೇಶಕ ಅಮಿತ್ ಕುಮಾರ್, ಹೆಚ್ಚಿನ ವೇಗವರ್ಧನೆ ಹಾಗೂ ಬ್ಯಾಟರಿಯ ಭಾರದಿಂದಾಗಿ ಇ–ವಾಹನಗಳು ಸಾಮಾಸ್ಯ ವಾಹನಗಳಿಗಿಂತ ಅಪಾಯಕಾರಿ ಎಂದು ಹೇಳಿದರು.
‘ಕೃತಕ ಬುದ್ಧಿಮತ್ತೆಯು ಚಾಲಕನ ಚಲನವಲನಗಳ ಬಗ್ಗೆ ನಿಗಾ ಇರಿಸುತ್ತದೆ. ಚಾಲಕನ ಆಲಸ್ಯತನದ ಲಕ್ಷಣಗಳನ್ನು ಪತ್ತೆ ಮಾಡುತ್ತದೆ. ಚಾಲಕನ ಗಮನ ಬೇರೆ ಕಡೆ ಇದ್ದರೆ ಅಥವಾ ಅಪಾಯಕಾರಿ ಚಾಲನೆ ಬಗ್ಗೆ ಎಚ್ಚರಿಕೆ ನೀಡುವುದು ಮಾತ್ರವಲ್ಲದೆ, ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅಪಘಾತಗಳನ್ನು ತಪ್ಪಿಸುತ್ತದೆ’ ಎಂದು ಅವರು ಹೇಳಿದರು.
ಅಲ್ಲದೆ, ಕೃತಕ ಬುದ್ಧಿಮತ್ತೆಯು ಅಪಘಾತಗಳ ಅಂಕಿ ಅಂಶ ಹಾಗೂ ಅವಲೋಕನ, ರಸ್ತೆ ಸೌಕರ್ಯ ಅಭಿವೃದ್ಧಿ ಹಾಗೂ ಅಪಘಾತದ ಬಳಿಕ ವೇಗದ ಪ್ರತಿಕ್ರಿಯೆ ನೀಡಲು ಸಹಾಯ ಮಾಡುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.