ADVERTISEMENT

ಹೊಸ ಟ್ರೆಂಡ್ ಹುಟ್ಟು ಹಾಕಿದ ಅಭಿನಂದನ್‌ ಗಿರಿಜಾ ಮೀಸೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 9:02 IST
Last Updated 3 ಮಾರ್ಚ್ 2019, 9:02 IST
ಚಿತ್ರ: ಎಎನ್‌ಐ ಟ್ವಿಟರ್‌
ಚಿತ್ರ: ಎಎನ್‌ಐ ಟ್ವಿಟರ್‌   

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನ್‌ ಅವರ ಗಿರಿಜಾ ಮೀಸೆ ಭಾರಿ ಟ್ರೆಂಡಿಂಗ್‌ ಆಗಿದ್ದು, ದೇಶದಲ್ಲಿ ಹೊಸ ಫ್ಯಾಷನ್‌ ಹುಟ್ಟು ಹಾಕಿದೆ.

ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಅಭಿನಂದನ್‌ ಶೌರ್ಯ, ಸಾಹಸ ಮತ್ತು ಪರಾಕ್ರಮಗಳ ಜತೆ ಅವರ ಮೀಸೆಯ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. ಅವರಂತೆ ತಾವೂ ಗಿರಿಜಾ ಮೀಸೆ ಬೆಳೆಸುವುದಾಗಿ ಅನೇಕ ಯುವಕರು ಹೇಳಿಕೊಂಡಿದ್ದಾರೆ.

ದೇಶದಲ್ಲಿ ಇನ್ನು ಮುಂದೆ ಅಭಿನಂದನ್‌ ಮೀಸೆ ಹೊಸ ಟ್ರೆಂಡ್‌ ಹುಟ್ಟು ಹಾಕಲಿದೆ ಎಂದು ಅನೇಕರು ಹೇಳಿದ್ದಾರೆ.

ADVERTISEMENT

ಗಿರಿಜಾ ಮೀಸೆಯ (ಗನ್‌ಸ್ಲಿಂಗರ್‌ ಮುಸ್ಟ್ಯಾಚ್‌) ಚಿತ್ರಗಳು, ವ್ಯಂಗ್ಯಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಪ್ರಸಿದ್ಧವಾಗಿವೆ.

ಪಾಕಿಸ್ತಾನ ಸೆರೆ ಹಿಡಿದಿದ್ದ ಭಾರತದ ಪೈಲಟ್‌ ಅಭಿನಂದನ್‌ ಮತ್ತು ಅವರ ಮೀಸೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಒಬ್ಬರು ಬರೆದಿದ್ದಾರೆ.

ಮಕ್ಕಳಿಗೆ ಅಭಿನಂದನ್‌ ಹೆಸರು
ಜೈಪುರ/ಲಖನೌ: ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಶುಕ್ರವಾರ ಜನಿಸಿದ ಮಕ್ಕಳಿಗೆ ಭಾರತೀಯ ವಾಯುಸೇನೆಯ ಪೈಟಲ್‌, ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಹೆಸರು ಇಡಲಾಗಿದೆ.

ರಾಜಸ್ಥಾನದ ಅಲ್ವಾರಾದ ಕಿಶನ್‌ಗಡದಲ್ಲಿ ಒಂದು ಮಗು ಮತ್ತು ಉತ್ತರ ಪ್ರದೇಶದ ಗೋಂಡಾ, ಹರ್ದೋಯಿ ಮತ್ತು ಗಾಜಿಪುರ ಜಿಲ್ಲೆಗಳಲ್ಲಿ ಶುಕ್ರವಾರ ಜನಿಸಿದ ಮೂರು ಮಕ್ಕಳಿಗೆ ಅಭಿನಂದನ್‌ ಎಂದು ನಾಮಕರಣ ಮಾಡಲಾಗಿದೆ.

ಅಭಿನಂದನ್‌ ಪೌರುಷ, ಪರಾಕ್ರಮವನ್ನು ಮೆಚ್ಚಿ ಮಕ್ಕಳಿಗೆ ಈ ನಾಮಕರಣ ಮಾಡಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.