ವೆಲ್ಲಿಂಗ್‌ಟನ್: ಮಕ್ಕಳಿಗೆ ಫೈಜರ್ ಇಂಕ್‌ನ ಕೋವಿಡ್–19 ಲಸಿಕೆ ಹಾಕಲು ನ್ಯೂಜಿಲೆಂಡ್‌ನ ಆರೋಗ್ಯ ನಿಯಂತ್ರಣ ಪ್ರಾಧಿಕಾರ ಮೆಡ್‌ಸೆಫ್ ತಾತ್ಕಾಲಿಕ ಅನುಮತಿ ನೀಡಿದೆ.
5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್‌ನ ಕೋವಿಡ್–19 ಲಸಿಕೆ ಹಾಕಲು ಅನುಮತಿ ನೀಡಿರುವ ಬಗ್ಗೆ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಎರಡು ಡೋಸ್‌ಗಳ ಮಕ್ಕಳ ಫೈಜರ್ ಲಸಿಕೆಗೆ ಅನುಮತಿ ನೀಡಿದ್ದು, ಕನಿಷ್ಠ 21 ದಿನಗಳ ಅಂತರದಲ್ಲಿ ಎರಡನೇ ಡೋಸ್ ಹಾಕಲು ತಿಳಿಸಲಾಗಿದೆ.
ನ್ಯೂಜಿಲೆಂಡ್‌ನ ಸಂಪುಟದಲ್ಲಿ ಇದಕ್ಕೆ ಅನುಮೋದನೆ ದೊರೆತರೆ, 2022ರ ಜನವರಿ ಕೊನೆಯ ಭಾಗದಲ್ಲಿ ಮಕ್ಕಳಿಗೆ ಲಸಿಕೆ ಕಾರ್ಯಕ್ರಮ ಶುರುವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.